ಬಂಧಿತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಬಗ್ಗೆ ಮಾಹಿತಿ ಸಂಗ್ರಹ: ಕೇರಳದಲ್ಲಿ ಯುಪಿ ಪೊಲೀಸ್ ವಿಶೇಷ ತಂಡ

Prasthutha|

- Advertisement -

ಕ್ಯಾಲಿಕಟ್ : ಬಂಧಿತ  ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ಉತ್ತರಪ್ರದೇಶ ಪೊಲೀಸರು ಕೇರಳಕ್ಕೆ ಆಗಮಿಸಿದ್ದಾರೆ. ಕ್ಯಾಲಿಕಟ್ ನಿವಾಸಿ ಫಿರೋಝ್ ಖಾನ್ ಮತ್ತು ಪಂದಲಂನ ಅನ್ಷಾದ್ ಬದ್ರುದ್ದೀನ್ ಅವರ ತನಿಖೆಯ ಭಾಗವಾಗಿ ಉತ್ತರಪ್ರದೇಶ ಪೊಲೀಸರು ಕೇರಳಕ್ಕೆ ಆಗಮಿಸಿದ್ದಾರೆ.

ಕೇರಳದಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣಗಳಿವೆಯೇ ಎಂದು ಉತ್ತರಪ್ರದೇಶ ಪೊಲೀಸರು ಪರಿಶೀಲಿಸಲಿದ್ದಾರೆ. ವಿಚಾರಣೆಗೆ ಉತ್ತರಪ್ರದೇಶ ವಿಶೇಷ ಕಾರ್ಯಪಡೆಯ ಇಬ್ಬರು ಅಧಿಕಾರಿಗಳೂ ಆಗಮಿಸಿದ್ದಾರೆ. ಕ್ಯಾಲಿಕಟ್ ಮೂಲದ ಫಿರೋಝ್ ಖಾನ್‌ನ ಮಾಹಿತಿ ಸಂಗ್ರಹಿಸಲು ಪೊಲೀಸರು ವಡಗರ ರೂರಲ್ ಎಸ್ಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಪಂದಲಂ ಮೂಲದ ಅನ್ಷಾದ್ ಬದ್ರುದ್ದೀನ್ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಉತ್ತರಪ್ರದೇಶ ಪೊಲೀಸರು ವಡಗರ ತಲುಪಿದ್ದಾರೆ. ವಿಶೇಷ ತಂಡವು ಫಿರೋಝ್ ಮತ್ತು ಅನ್ಷಾದ್ ಅವರ ಮನೆಗಳನ್ನೂ ಪರಿಶೀಲಿಸಲಿದೆ.

- Advertisement -

ಅನ್ಷಾದ್ ಮತ್ತು ಫಿರೋಝ್ ಅವರನ್ನು ಉತ್ತರಪ್ರದೇಶ ಪೊಲೀಸರು ಈ ತಿಂಗಳ 16 ರಂದು ಬಂಧಿಸಿದ್ದರು. ದೇಶದಲ್ಲಿ ಸ್ಫೋಟಗಳನ್ನು ನಡೆಸಲು ಇವರಿಬ್ಬರು ಯೋಜಿಸಿದ್ದರು ಎಂದು ಉತ್ತರಪ್ರದೇಶ ಪೊಲೀಸರು ಸುಳ್ಳು ಆರೋಪಗಳನ್ನು ನೀಡಿ ಅಮಾಯಕ ಯುವಕರಿಬ್ಬರನ್ನು ಬಂಧಿಸಿದ್ದರು. ಇವರಿಬ್ಬರಿಗೆ ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮಾಅತ್ – ಉಲ್ – ಮುಜಾಹಿದ್ದೀನ್ ಜೊತೆ ಸಂಬಂಧವಿದೆ, ದೇಶಕ್ಕೆ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಮೂಲಕ ದಾಳಿ ನಡೆಸಲು ಅವರು ಯೋಜಿಸಿದ್ದಾರೆ ಎಂಬುದು ಉತ್ತರಪ್ರದೇಶ ಪೊಲೀಸರ ಆರೋಪ.

Join Whatsapp