ಅತ್ಯಾಚಾರ ಆರೋಪಿ ಠಾಣೆಯಲ್ಲೇ ಆತ್ಮಹತ್ಯೆ ಪ್ರಕರಣ| ನಾಲ್ವರು ಪೊಲೀಸರು ಅಮಾನತು

Prasthutha|

ವಿಜಯಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯೊಬ್ಬ ಪೊಲೀಸ್ ಠಾಣೆಯ ಶೌಚಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

 ಸಿಂದಗಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಹೊಸಮನಿ, ಪೇದೆಗಳಾದ ಹೆಚ್.ಸಿ.ಮಂತ್ರಿ, ಗುರುರಾಜ ಮಶಿಹಾಳ ಮತ್ತು ಆನಂದ ಪಾಟೀಲ್ ರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳ ಪ್ರಕಾರ ಅಮಾನತುಗೊಂಡವರಾಗಿದ್ದಾರೆ.

- Advertisement -

ಘಟನೆ ಹಿನ್ನೆಲೆ…

ಆಗಸ್ಟ್ 28ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ 40 ವರ್ಷದ ದೇವೇಂದ್ರ ಸಂಗೋಗಿಯನ್ನು ಸಿಂದಗಿ ಠಾಣೆಯ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯು ನಿನ್ನೆ ಶೌಚಾಲಯದಲ್ಲೇ ತನ್ನ ಪ್ಯಾಂಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

- Advertisement -