ಪ್ರವೀಣ್ ತಂದೆಯ ಹೇಳಿಕೆಯ ಆಯಾಮದಲ್ಲೂ ಪೊಲೀಸ್ ಇಲಾಖೆ ತನಿಖೆ ನಡೆಸಲಿ:ಅಶ್ರಫ್ ಕಲ್ಲೇಗ

Prasthutha|

ಪುತ್ತೂರು: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಯ ಹಿಂದಿನ ಷಡ್ಯಂತ್ರವನ್ನು ಬಹಿರಂಗಗೊಳಿಸಬೇಕೆಂದು ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್  ಅಧ್ಯಕ್ಷ ಅಶ್ರಫ್ ಕಲ್ಲೇಗ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisement -

ಅದೇ ರೀತಿ ಈ ಪ್ರಕರಣದ ದಿಕ್ಕು ತಪ್ಪುವ ಲಕ್ಷಣಗಳು ಕಾಣುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡಕ್ಕೆ ಒಳಗಾಗಿದೆ.ಅಮಾಯಕರು ಬಲಿ ಪಶುಗಳಾಗದಂತೆ ಜಾಗ್ರತೆ ವಹಿಸಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅದೇ ರೀತಿ ಈ ಒಂದು ಪ್ರಕರಣವನ್ನು ಕಳಂಜ ಮಸೂದ್ ಹತ್ಯೆಗೆ ಪ್ರತೀಕಾರ ಎಂಬ ಆಯಾಮದ ಮೂಲಕ ಮಾತ್ರವಲ್ಲದೆ, ಮೃತ ಪ್ರವೀಣ್ ನ ತಂದೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಆಧಾರದಂತೆ ಪ್ರವೀಣ್ ನಿಗೆ ಆತನ ಅಂಗಡಿಯ ಅಕ್ಕಪಕ್ಕದ ನಾಲ್ವರು ಶತ್ರುಗಳಿದ್ದು, ಅವರ ಮೇಲೆಯೂ ಸಂಶಯವಿದೆ. ಮಗನ ಅಂತಿಮ ದರ್ಶನಕ್ಕೆ ಆ ನಾಲ್ವರು ಬಂದಿಲ್ಲ ಎಂಬ ಹೇಳಿಕೆಯನ್ನೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಈ ಆಯಾಮದಲ್ಲೂ ತನಿಖೆ ನಡೆಸಿ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಯಾವುದೇ ಕಾರಣಕ್ಕೂ ಅಮಾಯಕರು ಬಲಪಶುವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

- Advertisement -

ಅದೇ ರೀತಿ ನಿನ್ನೆ ಶವ ಮೆರವಣಿಗೆ ಸಂದರ್ಭದಲ್ಲಿ ಮಸೀದಿಗೆ ಮತ್ತು ಅಂಗಡಿಗಳಿಗೆ ಕಲ್ಲೆಸೆದ ಹಾಗೂ ನಿಂತಿಕಲ್ ನಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿ ಇನ್ನೊಬ್ಬ ಯುವಕನ ಬೈಕ್ ನ ಧ್ವಂಸಗೊಳಿಸಿದ ಸಂಘಪರಿವಾರದ ದುಷ್ಕರ್ಮಿಗಳ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಹಾರ ಘೋಷಣೆಯಲ್ಲಿ ತಾರತಮ್ಯ ಧೋರಣೆ ತಾಳದೆ ಭಜರಂಗದಳದ ಗೂಂಡಾಗಳಿಂದ ಹತ್ಯೆಗೊಳಗಾದ ಮಸೂದ್ ಕುಟುಂಬಕ್ಕೂ ಸಮಾನ ರೀತಿಯ ಪರಿಹಾರ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp