ಮೋದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುಟ್ಟ ಬಾಲಕನ ಬಟ್ಟೆ ಬಿಚ್ಚಿಸಿದ ಭದ್ರತಾ ಸಿಬ್ಬಂದಿ!

Prasthutha|

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್​​ವೇಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಆಗಮಿಸಿದ್ದು, ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದ ಪುಟ್ಟ ಬಾಲಕನ ಬಟ್ಟೆಯನ್ನು ಪೊಲೀಸರು ಬಿಚ್ಚಿಸಿದ ಘಟನೆ ನಡೆದಿದೆ.

- Advertisement -

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇದಿಕೆ ಸುತ್ತಲು ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಪರಿಶೀಲಿಸಲಾಗುತ್ತಿದೆ. ಈ ವೇಳೆ ತಾಯಿಯೊಬ್ಬರು ಬಾಲಕನನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ತಪಾಸಣೆ ವೇಳೆ ಮಗುವಿನ ಬಟ್ಟೆ ಬಿಚ್ಚಿಸಿದ್ದಾರೆ. ಬಾಲಕ ಕಪ್ಪು ಟಿಶರ್ಟ್​​ ಧರಿಸಿದ ಹಿನ್ನೆಲೆ ಬಟ್ಟೆ ಬಿಚ್ಚಲಾಗಿದೆ ಎನ್ನಲಾಗಿದೆ.

Join Whatsapp