ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

ಕೊಟ್ಟಿಗೆಹಾರ: ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿರುವ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಬಾಳೂರು ಹೋಬಳಿಯ ಮಲೆಮನೆ ಎಂಬಲ್ಲಿ ಖಚಿತ ಮಾಹಿತಿ ಮೇರೆಗೆ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮಲೆಮನೆಯ ಸುರೇಶ ಎಂಬಾತನನ್ನು ಬಂಧಿಸಿ, 200ಲೀ ಬೆಲ್ಲದ ಕೊಳೆ,ಹಾಗೂ ಎರಡು ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.

- Advertisement -


ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್,ಸಿಬ್ಬಂದಿ ರಾಜೇಂದ್ರ,ಜಾಫರ್,ಅಭಿಲಾಷ್,ಪ್ರದೀಪ್,ವಸಂತ್,ಸತೀಶ್ ಮತ್ತಿತರರು ಭಾಗವಹಿಸಿದ್ದರು.