ನನ್ನ ಕುಟುಂಬದ ಮಹಿಳೆಯರ ಜೊತೆಗೆ ಪೊಲೀಸರು ಅಸಭ್ಯವಾಗಿ ನಡೆದುಕೊಂಡಿದ್ದಾರೆ: ಆಝಂ ಖಾನ್

Prasthutha|

ಲಕ್ನೋ: ರಾಂಪುರದ ಪೊಲೀಸರು ಮತ್ತು ಆಡಳಿತ ನಡೆಸುವವರು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ, ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಕುಟುಂಬದ ಮಹಿಳೆಯರ ಜೊತೆಗೆ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮಾಜಿ ಸಂಸದ, ಹಾಜಿ ಶಾಸಕ ಆಝಂ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ರಾಂಪುರದಲ್ಲಿ ಪ ಚುನಾವಣೆ ಡಿಸೆಂಬರ್ 5ರಂದು ನಡೆಯುತ್ತಿದೆ. ಪೊಲೀಸರು ಈ ಸಂಬಂಧ ನನ್ನ ಪತ್ನಿ ರಾಂಪುರದ ಮಾಜಿ ಸಂಸದೆ ತಂಜೀನ್ ಫಾತಿಮಾರಿಗೆ ಬೆದರಿಕೆ ಹಾಕಿದ್ದಾರೆ. ಅಸಹ್ಯವಾದ ಮಾತುಗಳನ್ನು ಆಡಿದ್ದಾರೆ ಎಂದು ಅಜಂ ಖಾನ್ ಹೇಳಿದ್ದಾರೆ.

ರಾಂಪುರ ಮನಪಾದಲ್ಲಿ ಕಾಣೆಯಾಗಿರುವ ವಸ್ತುಗಳ ಬಗೆಗಿನ ಪ್ರಕರಣದಲ್ಲಿ ನನ್ನ ಜೊತೆಗೆ ಆರೋಪಿಯಾಗಿರುವ ಮುಹಮ್ಮದ್ ತಾಲಿಬ್ ಮನೆಗೆ ಪೊಲೀಸರು ದಾಳಿ ಮಾಡಿದ್ದರು. ಆದರೆ ಆ ಸಲಕರಣೆಗಳು ಮೊನ್ನೆ ಸೆಪ್ಟೆಂಬರ್’ನಲ್ಲಿ ಜವ್ಹರ್ ವಿಶ್ವವಿದ್ಯಾನಿಲಯದಲ್ಲಿ ಪತ್ತೆಯಾದವು ಎಂದು ಅಜಂ ಖಾನ್ ಹೇಳಿದರು.

- Advertisement -

ಪೊಲೀಸರ ಬೆದರಿಕೆಯಿಂದ ತಾಲಿಬ್ ಊರು ಬಿಟ್ಟಿದ್ದಾನೆ. “50 ಮಂದಿ ಪಕ್ಷದ ಕಾರ್ಯಕರ್ತರ ಮನೆಯ ಬಾಗಿಲುಗಳನ್ನು ಒಡೆಯಲಾಗಿದೆ. ದಾರಿಯಲ್ಲೇ ಹಲವು ಮುಗ್ಧರನ್ನು ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ. ಮಹಿಳೆಯರ ಬಗ್ಗೆ ಪೊಲೀಸರು ಮಾನಹಾನಿಕರ ಮಾತುಗಳನ್ನು ಬಳಸಿದ್ದಾರೆ. ಮಹಿಳೆಯರ ಬಗ್ಗೆ ಇಂತಹ ಅಮಾನವೀಯ, ನಾಚಿಗೆಗೇಡಿನ ವರ್ತನೆಯನ್ನು ಈ ಆಡಳಿತ ತೋರಿಸಿದೆ. ತಾಲಿಬ್’ನ ವೃದ್ಧಾಪ್ಯದ ತಾಯಿ ಕಾಯಿಲೆ ಬಿದ್ದಿದ್ದರು. ಅವರನ್ನು ನೋಡಲು ನನ್ನ ಹೆಂಡತಿ ಹೋಗಿದ್ದಾಗ ಪೊಲೀಸರು ಆ ಮನೆಗೆ ಸುಮ್ಮನೆ ದಾಳಿ ಮಾಡಿದ್ದಾರೆ” ಎಂದೂ ಆಝಂ ಖಾನ್ ತಿಳಿಸಿದರು.

“ಅವರು ನನ್ನ ಮತದಾನದ ಹಕ್ಕು ಕಸಿಯಲು ಇಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ನಾನು ನನ್ನ ಪಕ್ಷಕ್ಕಾಗಿ ನನ್ನ ಮತ ಉಳಿಸಿಕೊಂಡಿದ್ದೇನೆ. ಪೊಲೀಸರ ಹಿಂಸಾಚಾರದ ಬಗೆಗಿನ ವೀಡಿಯೋಗಳನ್ನು ನಾನು ಕೋರ್ಟಿಗೆ ನೀಡಲು ಸಿದ್ಧನಿದ್ದೇನೆ. ರಾಂಪುರದಲ್ಲಿ ಸುಮ್ಮನೆ ಚುನಾವಣೆ ನಡೆಸುವುದು ಯಾಕೆ? ಬಿಜೆಪಿಯ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಘೋಷಣೆ ಮಾಡುವಂತೆ ಎಸ್ ಪಿ ಅಧ್ಯಕ್ಷರಾದ ಅಖಿಲೇಶ್ ಸಿಂಗ್ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಲಿ. ನಮ್ಮ ಪಕ್ಷದವರಿಗೆ ಮತ ಹಾಕದಂತೆ ಬೆದರಿಕೆ ಹಾಕುತ್ತಿದ್ಧಾರೆ. ಬಾಡಿಗೆ ಮನೆಯವರನ್ನು ಓಡಿಸುತ್ತಿದ್ದಾರೆ.” ಎಂದು ಆಝಂ ಖಾನ್ ತಿಳಿಸಿದರು.

ಬುಧವಾರ, ಗುರುವಾರ ಎಸ್’ಪಿ ನಾಯಕ ಅಖಿಲೇಶ್ ಸಿಂಗ್ ಮತ್ತು ಆರ್’ಎಲ್ ಡಿ ಮುಖ್ಯಸ್ಥ ಜಯಂತ್ ಚೌಧರಿ ರಾಂಪುರದಲ್ಲಿ ಪ್ರಚಾರಕ್ಕೆ ಬರುತ್ತಿದ್ದಾರೆ. ಇದೇ ವೇಳೆ ರಾಂಪುರದ ಎಸ್ ಪಿ ಸನ್ಸಾರ್ ಸಿಂಗ್ ಅವರು ಆ ಎರಡು ದಿನ ನಾವು ಕ್ರಿಮಿನಲ್’ಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದಾರೆ.

“ಸಾಕಷ್ಟು ಮುಸ್ಲಿಂ ಮತದಾರರು ಮತ್ತು ಅಜಂ ಖಾನ್ ಬೆಂಬಲಿಗರು ಈಗ ಬಿಜೆಪಿ ಪರ ವಾಲಿರುವುದರಿಂದ ಅವರು ಅನಗತ್ಯ ಆರೋಪ ಮಾಡುತ್ತಿದ್ದಾರೆ” ಎಂದು ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಹೇಳಿದರು.

ರಾಂಪುರ ಸದರ್ ವಿಧಾನ ಸಭಾ ಕ್ಷೇತ್ರದ ಚುನಾವಣೆ ಡಿಸೆಂಬರ್ 5ರಂದು ನಡೆದು, 8ರಂದು ಎಣಿಕೆ ಫಲಿತಾಂಶ ಬರಲಿದೆ.

Join Whatsapp