ನಡುರಸ್ತೆಯಲ್ಲಿ ಸಮವಸ್ತ್ರವನ್ನು ಬಿಚ್ಚಿ ಗಲಾಟೆ ನಡೆಸಿದ ಪೊಲೀಸ್ ಪೇದೆ ಅಮಾನತು !

Prasthutha|

ಭೋಪಾಲ್: ಪಾನಮತ್ತ ಪೊಲೀಸ್ ಪೇದೆಯೊಬ್ಬ ತನ್ನ ಸಮವಸ್ತ್ರವನ್ನು ತೆಗೆದು ರಸ್ತೆಮಧ್ಯೆ ವ್ಯಕ್ತಿಯೊಂದಿಗೆ ಗಲಾಟೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿಎ.

- Advertisement -

ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಕಾನ್ ಸ್ಟೇಬಲ್ ಸುಶೀಲ್ ಮಾಂಡವಿ ಅಮಾತನುಗೊಂಡವರು. ಇವರು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಂದಿಗೆ ಗಲಾಟೆ ಮಾಡಿ, ಎಲ್ಲರ ಮುಂದೆಯೇ ತಮ್ಮ ಸಮವಸ್ತ್ರವನ್ನು ಬಿಚ್ಚಿ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೇದೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ಅಗರ್ವಾಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Join Whatsapp