ಮುಸ್ಲಿಂ ದಂಪತಿಗಳ ವೇಷ ಧರಿಸಿ ಠಾಣೆಗಳ ತಪಾಸಣೆ ನಡೆಸಿದ ಪೊಲೀಸ್ ಆಯುಕ್ತರು!

Prasthutha|

ಮಹಾರಾಷ್ಟ್ರ:  ಪೊಲೀಸ್ ಠಾಣೆಗಳ ತಪಾಸಣೆಗಾಗಿ ಪೊಲೀಸ್ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಸಾಮಾನ್ಯ ಮುಸ್ಲಿಂ ದಂಪತಿಯ ವೇಷದಲ್ಲಿ ತೆರಳಿ ತನಿಖೆಯನ್ನು ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

- Advertisement -

ಸಿಬ್ಬಂದಿಗಳ ವರ್ತನೆ ಮತ್ತು ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಮತ್ತು ಸಹಾಯಕ ಪೊಲೀಸ್ ಆಯುಕ್ತೆ ಪ್ರೇರಣಾ ಕಟ್ಟೆ ಮುಸ್ಲಿಂ ದಂಪತಿಗಳ ವೇಷದಲ್ಲಿ ಮೂರು ಪೊಲೀಸ್ ಠಾಣೆಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ.

ತನ್ನನ್ನು ಜಮಾಲ್ ಕಮಲ್ ಖಾನ್ ಎಂದು ಗುರುತಿಸಿಕೊಂಡ ಪೊಲೀಸ್ ಆಯುಕ್ತರು ಕುರ್ತಾ ಮತ್ತು ಜೀನ್ಸ್ ಧರಿಸಿ ನಕಲಿ ಗಡ್ಡ, ಟೊಪ್ಪಿ ಮತ್ತು ಮಾಸ್ಕ್ ನ್ನು ಹಾಕಿದ್ದರು. ಪ್ರೇರಣಾ ಕಟ್ಟೆ, ಹೆಂಡತಿಯ ವೇಷದಲ್ಲಿದ್ದರು.

- Advertisement -

ಮುಸ್ಲಿಮ್ ದಂಪತಿಗಳ ವೇಷದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂರು ಪೊಲೀಸ್ ಠಾಣೆಗಳಲ್ಲಿ ಪರೀಕ್ಷೆ ನಡೆಸಿದ್ದು, ಒಂದರಲ್ಲಿ ಚೈನ್ ಕಳ್ಳತನವಾಗಿದೆ ಎಂದು ಇನ್ನೊಂದು ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆಂದು ಮತ್ತೊಂದು ಠಾಣೆಯಲ್ಲಿ ಆಂಬ್ಯುಲೆನ್ಸ್ ಗೆ ಹಣ ಕೇಳುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ಸಾಮಾನ್ಯ ಜನರ ಬಗ್ಗೆ ಸಿಬ್ಬಂದಿಗಳು ಯಾವ ರೀತಿ ಸ್ಪಂದಿಸುತ್ತಾರೆ. ಅವರ ನಡವಳಿಕೆ ಹೇಗಿರುತ್ತದೆ ಎಂದು ಪರೀಕ್ಷಿಸಲು ಪ್ರಕಾಶ್ ದೂರು ದಾಖಲಿಸಿದ್ದು, ಮೂರು ಪೊಲೀಸ್ ಠಾಣೆಗಳಲ್ಲಿ ಪರೀಕ್ಷೆ ನಡೆಸಿದಾಗ ಒಂದು ಠಾಣೆಯಲ್ಲಿ ಪೊಲೀಸರು ದುರ್ವರ್ತನೆಯಿಂದ ನಡೆದುಕೊಂಡಿದ್ದಾರೆ. ಈ ರೀತಿ ಪೊಲೀಸರ ಸ್ಪಂದನೆ ಹೇಗಿರುತ್ತದೆ ಎಂದು ಅಧಿಕಾರಿಗಳು ಗಮನಿಸಿದ್ದಾರೆ.

Join Whatsapp