ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ PFI ದೂರು

Prasthutha|

PFI ಸಂಘಟನೆಯನ್ನು ಮತ್ತು ಮುಸ್ಲಿಮರನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ದಿನಾಂಕ 07-05-2021 ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕಾರ್ಡ್ ನಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಪೋಸ್ಟ್ ಗ್ರೂಪಿನಲ್ಲಿ ಬೆಂಗಳೂರಿನಲ್ಲಿ ಕೋವಿಡ್ ನಿಂದ ನಿಧನರಾದವರ ಅಂತ್ಯ ಸಂಸ್ಕಾರಕ್ಕೆ ಏಜನ್ಸಿಗಳು ಮೃತರ ಕುಟುಂಬದಿಂದ 35 ಸಾವಿರ ಡೀಲ್ ಕುದುರಿಸಿದ್ದು, ಡೀಲ್ ಕುದುರಿಸಿಕೊಂಡ ಏಜನ್ಸಿ 5ರಿಂದ 8ಮಂದಿ ಮುಸ್ಲಿಮರಿಗೆ 7 ಸಾವಿರದಿಂದ 8 ಸಾವಿರ ರೂಗಳನ್ನು ನೀಡಿ ಮೃತದೇಹವನ್ನು ದಹನಕ್ಕೆ ನೀಡುತ್ತವೆ. ದಹನದ ವೇಳೆ ಟೋಪಿ ಹಾಕಿಕೊಂಡು ಮುಸ್ಲಿಮರು ದೊಡ್ಡ ದೊಡ್ಡ ಸಾಮಾಜಿಕ ಸೇವೆ ಮಾಡಿಕೊಳ್ಳುವಂತೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಇದೊಂದು ಅತೀ ದೊಡ್ಡ ಹಗರಣವಾಗಿದೆ ಎಂದು ಪಿಎಫ್ಐ ಸಂಘಟನೆಯ ಧ್ವಜ ಇರುವ ಟೀ ಶರ್ಟು ಧರಿಸಿದ ಸ್ವಯಂ ಸೇವಕರ ಫೋಟೋಗೆ ಕೆಂಪು ಶಾಹಿಯಲ್ಲಿ ಗುರುತು ಮಾಡಿ ಪಿಎಫ್ಐ ಸಂಘಟನೆಯ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.   

Join Whatsapp