ಹಣದ ಮೂಲ ಬಹಿರಂಗಪಡಿಸಿ: ಮದ್ರಸಾಗಳಿಗೆ ಸರ್ಕಾರ ಸೂಚನೆ

Prasthutha|

ಗುವಾಹಟಿ: ಭಯೋತ್ಪಾದನೆಯ ನೆಪದಲ್ಲಿ ಮದ್ರಸಾಗಳ ಮೇಲೆ ಕೆಂಗಣ್ಣು ಬೀರಿರುವ ಅಸ್ಸಾಂ ಬಿಜೆಪಿ ಸರ್ಕಾರ, ಮದ್ರಸಾ ನಡೆಸಲು ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಬಹಿರಂಗಪಡಿಸುವಂತೆ ಎಲ್ಲಾ ಮದ್ರಸಾಗಳಿಗೆ ಸೂಚನೆ ನೀಡಿದೆ

- Advertisement -

ಮುಸ್ಲಿಮ್ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ, ರಾಜ್ಯದಲ್ಲಿ ಸುಮಾರು ಒಂದು ಸಾವಿರ ಮದ್ರಸಾಗಳಿವೆ. ಅವುಗಳಲ್ಲಿ ಕೆಲವು ನೋಂದಣಿಯಾಗಿಲ್ಲ. ಮುಸ್ಲಿಮ್ ಸಂಘಟನೆಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅಂತಹ ಮದ್ರಸಾಗಳು ತಮ್ಮ ವಿವರ, ಜಮೀನು, ಶಿಕ್ಷಕರು, ಹಣದ ಮೂಲವನ್ನು ಆನ್ ಲೈನ್ ನಲ್ಲಿ ಬಹಿರಂಗಪಡಿಸಬೇಕು ಎಂದು ಹೇಳಿದರು.

ಇದುವರೆಗೆ ಅಸ್ಸಾಮ್ ನಲ್ಲಿ 800ಕ್ಕೂ ಅಧಿಕ ಸರ್ಕಾರಿ ಅನುದಾನಿತ ಮದ್ರಸಾಗಳನ್ನು ಬಿಜೆಪಿ ಸರ್ಕಾರ ಮುಚ್ಚಿದೆ.

Join Whatsapp