ಮುಂಬೈ: ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮುಂಬೈ ಕೊಳಚೆ ಪ್ರದೇಶ ಕಾಣದಂತೆ ಬಿಳಿ ಬಟ್ಟೆ ಹಾಗೂ ಶೀಟ್’ಗಳನ್ನು ಕಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಿಳಿ ಬಟ್ಟೆ ಕಟ್ಟೆ ಅದರ ಮೇಲೆ ಬಿಜೆಪಿ ಬಾವುಟವನ್ನು ಅಳವಡಿಸಿರುವುದು ವೀಡಿಯೋದಲ್ಲಿ ಕಾಣಬಹುದು.
ಮುಂಬೈಯ ಸಿಎಸ್’ಟಿ ಪ್ರದೇಶದಲ್ಲಿರುವ ಸ್ಲಂಗಳನ್ನು ಕಾಣದಂತೆ ಮಾಡಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕೂಡ ಬಡ ಕುಟುಂಬದಿಂದ ಬಂದವರು. ಹಾಗಿದ್ದರೂ ಅವರಿಗೆ ಬಡವರನ್ನು ಅಡಗಿಸಿರುವ ಪ್ರಯತ್ನವೇಕೆ? ಎಂದು ಹಲವರು ಟೀಕಿಸಿದ್ದಾರೆ.