ಅಪಹಾಸ್ಯಕ್ಕೆ ಕಾರಣವಾದ ಪಿಎಂ ಪೋಷಣ್ ನ ‘ತಿಥಿ ಭೋಜನ’!

Prasthutha|

 ಹೊಸದಿಲ್ಲಿ: ‘ಪಿಎಂ-ಪೋಷಣ್’ ಎನ್ನುವ ಮರುನಾಮಕರಣದೊಂದಿಗೆ ಜಾರಿಗೊಳ್ಳುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ‘ಪದ ಅಪಭ್ರಂಶ’ ದಿಂದ ಚರ್ಚೆಗೆ ಒಳಗಾಗಿದೆ.

- Advertisement -

 ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ಹಣ್ಣು ಹಂಪಲು, ಸಹಿ ತಿನಿಸು ನೀಡುವ ‘ತಿಥಿ ಭೋಜನ’ ಹೆಸರಿನ ಉಪ ಯೋಜನೆ ಆರಂಭಿಸಲಾಗಿದ್ದು , ಇದು ಕನ್ನಡದಲ್ಲಿ ಭಿನ್ನ ಅರ್ಥಕ್ಕೆ ಎಡೆಮಾಡಿಕೊಟ್ಟಿದೆ.

ಹಿಂದಿಯಲ್ಲಿ ‘ತಿಥಿ’ ಎಂದರೆ ದಿನಾಂಕ ಅಥವಾ ದಿನ ಎನ್ನುವ ಅರ್ಥ ಇದೆ. ವಿಶೇಷ ದಿನ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಕೇಂದ್ರ ಸರಕಾರ ‘ತಿಥಿ ಭೋಜನ’ ಪರಿಚಯಿಸಿದೆ . ಆದರೆ ದಕ್ಷಿಣ ಭಾರತದಲ್ಲಿ ಯಾರಾದರೂ ಸತ್ತ ಬಳಿಕ ನೆಂಟರಿಷ್ಟರಿಗೆ ನೀಡುವ ವಿಶೇಷ ಊಟಕ್ಕೆ ‘ತಿಥಿ ಊಟ’ ಎನ್ನುವ ವಾಡಿಕೆ ಇದೆ. ಇದನ್ನೇ ಅಪಹಾಸ್ಯ ಮಾಡಿ ಕೇಂದ್ರದ ಯೋಜನೆ ವಿರುದ್ಧ ಕೆಲವರು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

- Advertisement -

“ಟಿಕ ಉತ್ಸವದ ನಂತರ ಈಗ ತಿಥಿ ಭೋಜನ ಪ್ರಾರಂಭವಾಗಿದೆ. ದೇಶದ ವೈವಿಧ್ಯತೆಯನ್ನು ಮರೆತು ನೀವು ಒಂದು ಭಾಷೆಯನ್ನು ಮುಂದೆ ತಂದಾಗ ಇದು ಸಂಭವಿಸುತ್ತದೆ” ಎಂದು ಹೇಳಿದ್ದಾರೆ.

Join Whatsapp