ನಿರೀಕ್ಷಿತ ಯಶಸ್ಸು ಕಾಣದ ಮಂಗಳೂರಿನ ಮೋದಿ ಕಾರ್ಯಕ್ರಮ

Prasthutha|

ಕಡಲತಡಿಯಲ್ಲಿ ನೀರಸ ಪ್ರತಿಕ್ರಿಯೆ

- Advertisement -

ಮಂಗಳೂರು: ಇಂದು ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ಇದರಿಂದ ರಾಜ್ಯ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಪ್ರಧಾನಿ ಸಮಾವೇಶದಲ್ಲಿ ಕನಿಷ್ಠ 1 ಲಕ್ಷ ಜನರು ಸೇರುವ ನಿರೀಕ್ಷೆ ಇತ್ತು, ಆದರೆ ಅದರ ಅರ್ಧದಷ್ಟು ಸೇರಿದ್ದರಿಂದ ಭಾರಿ ನಿರೀಕ್ಷೆಯ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ. ಮೋದಿ ಸಮಾವೇಶದಲ್ಲಿ ಸುಮಾರು 50 ಸಾವಿರ ಜನರು ಭಾಗಿಯಾಗಿದ್ದರು.


ಸಮಾವೇಶದಲ್ಲಿ ಪ್ರಧಾನ ಮಂತ್ರಿಗಳ ಭಾಷಣ ಕೂಡ ನೀರಸವಾಗಿತ್ತು. ಪ್ರಧಾನಿಯ ಹಿಂದಿ ಭಾಷಣ ಕನ್ನಡಕ್ಕೆ ಭಾಷಾಂತರ ಮಾಡದ ಹಿನ್ನೆಲೆಯಲ್ಲಿ ಸೇರಿದ್ದ ಜನರಿಗೂ ಮೋದಿಯವರ ಮಾತುಗಳು ಅರ್ಥ ಆಗಲಿಲ್ಲ. ಮೋದಿಯವರು ಭಾಷಣ ಮಾಡುವಾಗ ಸಭಿಕರು ಒಬ್ಬರನ್ನೊಬ್ಬರ ಮುಖ ನೋಡುತ್ತಿದ್ದರು. ಮೋದಿಯವರು ಕೂಡ ಕಾರ್ಯಕ್ರಮದ ಬಗ್ಗೆ ಸಮಾಧಾನ ಪಟ್ಟಂತೆ ಕಂಡುಬರಲಿಲ್ಲ. ಕಾಟಾಚಾರಕ್ಕೆ ಎಂಬಂತೆ ಭಾಷಣ ಮಾಡಿದಂತಿತ್ತು.

- Advertisement -


ಮೋದಿ ಸಮಾವೇಶವನ್ನು ಯಶಸ್ವಿಗೊಳಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾರಿ ಹರಸಾಹಸ ನಡೆದಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ನೆರೆಯ ಕೇರಳದಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಲೆಕ್ಕಾಚಾರ ಹಾಕಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತ ಕೂಡ ಹೆಚ್ಚಿನ ಜನರ ಸೇರಿಸುವ ಉದ್ದೇಶದಿಂದ ಕೆಲಸ ಮಾಡಿತ್ತು. ಸ್ತ್ರೀ ಸಂಘದ ಮಹಿಳೆಯರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಆದೇಶ ಮಾಡಲಾಗಿತ್ತು. ಗಣೇಶ ವಿಸರ್ಜನೆಯ ನೆಪದಲ್ಲಿ ಮಂಗಳೂರು ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಸಮಾವೇಶ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇದರಿಂದ ರಾಜ್ಯ ಬಿಜೆಪಿಗೆ ಹಿನ್ನಡೆಯಾಗಿದ್ದು, ಮೋದಿಯವರು ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

Join Whatsapp