‘ಪರಿಸರಕ್ಕಾಗಿ ಜೀವನಶೈಲಿ’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿರುವ ಪ್ರಧಾನಿ ಮೋದಿ

Prasthutha|

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಉಪಸ್ಥಿತಿಯಲ್ಲಿ ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿನ ಏಕತಾ ಪ್ರತಿಮೆ ಬಳಿ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

- Advertisement -


ಮಿಷನ್ ಲೈಫ್ ಸುಸ್ಥಿರತೆಯ ಕಡೆಗೆ ಜನರ ಸಾಮೂಹಿಕ ವಿಧಾನವನ್ನು ಬದಲಾಯಿಸಲು ಮೂರು ವಿಧದ ಕಾರ್ಯತಂತ್ರವನ್ನು ಅನುಸರಿಸುವ ಗುರಿಯನ್ನು ಹೊಂದಿದೆ.


ಅಧಿಕೃತ ಪ್ರಕಟಣೆಯ ಪ್ರಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆವಾಡಿಯಾದಲ್ಲಿ ಇಂದಿನಿಂದ 22 ರವರೆಗೆ ಆಯೋಜಿಸಿರುವ 10 ನೇ ಮಿಷನ್ಸ್ ಮುಖ್ಯಸ್ಥರ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಲಿದ್ದು, ಸಮ್ಮೇಳನವು ಪ್ರಪಂಚದಾದ್ಯಂತದ ರಾಯಭಾರಿಗಳು ಮತ್ತು ಹೈಕಮಿಷನರ್‌ಗಳ ಸಹಿತ 118 ಭಾರತೀಯ ಮಿಷನ್‌ಗಳ ಮುಖ್ಯಸ್ಥರನ್ನು ಒಟ್ಟುಗೂಡಿಸುತ್ತದೆ.

- Advertisement -

ಮೂರು ದಿನಗಳ ಕಾಲ ನಡೆಯುವ 23 ಸೆಷನ್ಸ್‌ಗಳಲ್ಲಿ ಸಮಕಾಲೀನ ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಆರ್ಥಿಕ ಪರಿಸರ, ಸಂಪರ್ಕ ಹಾಗೂ ಭಾರತದ ವಿದೇಶಾಂಗ ನೀತಿಯ ಆದ್ಯತೆಗಳಂತಹ ವಿಷಯಗಳ ಕುರಿತು ವಿವರವಾದ ಆಂತರಿಕ ಚರ್ಚೆಗಳನ್ನು ನಡೆಸಲಾಗುತ್ತದೆ.


ಗುಜರಾತ್‌ನ ಕೆವಾಡಿಯಾದಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಯೂ ನಡೆಯಲಿದೆ.

Join Whatsapp