ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಅಮಾನ್ಯಗೊಂಡ ಮತದ ಬ್ಯಾಲೆಟ್ ಪೇಪರ್ ನಲ್ಲಿ ಏನಿತ್ತು..?

Prasthutha|

ನವದೆಹಲಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಪ್ರತಿಸ್ಫರ್ಧಿ ಶಶಿ ತರೂರ್ ಅವರಿಗೆ ಕೇವಲ 1072  ಮತವನ್ನು ಪಡೆದಿದ್ದಾರೆ.

- Advertisement -

ಶಶಿ ತರೂರ್ ಸೋತಿರಬಹುದು. ಆದರೆ ತರೂರ್ ಅನೇಕರ ಹೃದಯವನ್ನು ಗೆದ್ದಿದ್ದಾರೆ.  ಮತ ಎಣಿಕೆಯಲ್ಲಿ ಅಮಾನ್ಯಗೊಂಡ ಬ್ಯಾಲೆಟ್ ಪೇಪರ್ ನಿಂದಲೂ ಬಯಲಾಗಿದೆ.

416 ಮತಗಳು ಬೇರೆ ಬೇರೆ ಕಾರಣಗಳಿಂದ ಅಮಾನ್ಯಗೊಂಡಿದೆ. ತರೂರ್ ಬಣದ ಮೂಲಗಳ ಪ್ರಕಾರ ಅಮಾನ್ಯವಾದ ಮತಗಳ ಪೈಕಿ ಬ್ಯಾಲೆಟ್ ಪೇಪರ್ ನಲ್ಲಿ ತರೂರ್ ಹೆಸರಿನ ಮುಂದೆ ಹೃದಯ ಮತ್ತು ಬಾಣದ ಬರಹವನ್ನು ಬರೆಯಲಾಗಿದೆ. ಅಲ್ಲದೆ ಮತ್ತೊಂದು ಬ್ಯಾಲೆಟ್ ನಲ್ಲಿ ಖರ್ಗೆ ಅವರ ಹೆಸರಿನ ಮುಂದೆ ಸ್ವಸ್ತಿಕ್ ಗುರುತು ಮಾಡಲಾಗಿದೆ ಎಂದು ತಿಳಿದು ಬಂದಿದೆ.  ಹೀಗಾಗಿ ಇದು, ತರೂರ್ ಅವರ ಬಗ್ಗೆ ಕಾಂಗ್ರೆಸ್ ನಲ್ಲಿ ಧನಾತ್ಮಕ ಭಾವನೆ ಇರುವುದು ಖಚಿತ ಪಡಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

- Advertisement -

ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಯುಪಿಯಲ್ಲಿ ಅವರಿಗೆ ಹೆಚ್ಚು ಮತಗಳು ಬಂದಿವೆ ಎಂದು ತರೂರ್ ಬಣ ಹೇಳಿಕೊಂಡಿದೆ.

Join Whatsapp