ನವದೆಹಲಿ: ಇಂದು ಉದ್ಘಾಟನೆಗೊಂಡ ದೆಹಲಿಯ ಪ್ರಗತಿ ಮೈದಾನ್ ಸುರಂಗ ಮಾರ್ಗ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಪ್ರಗತಿ ಮೈದಾನ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದು ಇದೇ ವೇಳೆ ಸುರಂಗ ಮಾರ್ಗವನ್ನು ಅವರು ಪರಿಶೀಲಿಸಿದ್ದಾರೆ.
ಈ ಮಧ್ಯೆ ರಸ್ತೆಯ ಬದಿಯಲ್ಲಿ ಸಿಕ್ಕ ಕೆಲ ಚಿಂದಿ, ಖಾಲಿ ನೀರಿನ ಬಾಟಲಿಯನ್ನು ಪ್ರಧಾನಿ ಮೋದಿ ಕೈಯ್ಯಲ್ಲೇ ಎತ್ತಿಕೊಂಡು ಕಸದ ಡಬ್ಬಿಗೆ ಹಾಕಿದ್ದಾರೆ. ಪ್ರಧಾನಿ ಸುರಂಗ ಮಾರ್ಗ ಪರಿಶೀಲಿಸುವ ವೇಳೆ ಬಾಟಲಿಯನ್ನು ಹೆಕ್ಕುವ ವಿಡಿಯೊ ತುಣುಕನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ಇಂಡಿಯಾ ಗೇಟ್ನಿಂದ ಕೇಂದ್ರ ದೆಹಲಿಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನ್ ಸುರಂಗ ಮಾರ್ಗವು 1.6 ಕಿಮೀ ಉದ್ದವಿದೆ.