ಪ್ರಧಾನಿ ಮೋದಿ 1000 ಚದರ ಕಿ.ಮೀ ಪ್ರದೇಶವನ್ನು ಸದ್ದಿಲ್ಲದೆ ಚೀನಾಕ್ಕೆ ಒಪ್ಪಿಸಿದ್ದಾರೆ: ರಾಹುಲ್ ಗಾಂಧಿ

Prasthutha|

ನವದೆಹಲಿ: ಪ್ರಧಾನಿ ಮೋದಿ ಅವರು ಭಾರತದ 1000 ಚದರ ಕಿ.ಮೀ ಪ್ರದೇಶವನ್ನು ಸದ್ದಿಲ್ಲದೆ ಚೀನಾಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

- Advertisement -

2020ರಲ್ಲಿ ಚೀನಾದೊಂದಿಗೆ ನಡೆದ ಲಡಾಖ್ ಒಪ್ಪಂದದ ಬಳಿಕ ಗಡಿಯ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿಯನ್ನು ಮರುಸ್ಥಾಪಿಸದಿರುವುದಕ್ಕೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಚೀನಾವು 2020ರ ಎಪ್ರಿಲ್ ಆದೇಶದಂತೆ ಯಥಾಸ್ಥಿತಿಯನ್ನು ಮರುಸ್ಥಾಪಿಸುವ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದೆ. ಅಲ್ಲದೆ ಪ್ರಧಾನಿ ಮೋದಿ ಸದ್ದಿಲ್ಲದೆ ಭಾರತದ 1000 ಚದರ ಕಿ.ಮೀ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿದ್ದಾರೆ. ಈ ಪ್ರದೇಶವನ್ನು ಹೇಗೆ ಹಿಂಪಡೆಯಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಲಿ ಎಂದು ತಿಳಿಸಿದ್ದಾರೆ.



Join Whatsapp