ಪಿಎಂ ಕೇರ್ಸ್ ಕೋವಿಡ್-19 ಫಂಡ್ । ಲಸಿಕೆಗಳಿಗೆ 100 ಕೋಟಿ ರೂ. ನೀಡಲು ಕೇಂದ್ರ ವಿಫಲ

Prasthutha|

ನವದೆಹಲಿ: ಯಾವುದೇ ರೀತಿಯ ತುರ್ತು ಪರಿಸ್ಥಿತಿ ಅಥವಾ ಸಂಕಷ್ಟವನ್ನು ಎದುರಿಸಲು ಪ್ರಧಾನಿ ಮೋದಿ ಆರಂಭಿಸಿದ ಪಿಎಂ ಕೇರ್ಸ್ ಫಂಡ್ ಎಂಬ ಯೋಜನೆ ಕೋವಿಡ್ 19 ಲಸಿಕೆಗೆ ಬೇಕಾಗಿದ್ದ 100 ಕೋಟಿ ರೂ. ಸೇರಿದಂತೆ ತನ್ನ ನಾಗರಿಕರಿಗೆ ನೆರವು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಫಂಡ್ ನ ಮೊತ್ತವನ್ನು ವಿನಿಯೋಗಿಸಲು ಕೇಂದ್ರ ವಿಫಲವಾಗಿದೆ.

- Advertisement -

ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಅಡಿಯಲ್ಲಿ ಸಲ್ಲಿಸಲಾದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಅಂಶ ಬೆಳಕಿಗೆ ಬಂದಿದೆ.

ಈ ಕುರಿತು ಆರ್.ಟಿ.ಐ ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವಾಲಯ ಈ ಅಂಶಗಳನ್ನು ಒಪ್ಪಿಕೊಂಡಿದೆ.
ಮಾತ್ರವಲ್ಲ ಲಸಿಕೆ ಅಭಿವೃದ್ಧಿಗೆ PM CARES ನಿಧಿಯಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ.

- Advertisement -

ಬಾತ್ರಾ ಅವರು ಅರ್ಜಿ ಸಲ್ಲಿಸಿದ್ದ ನಾಲ್ಕು ತಿಂಗಳ ಬಳಿಕ ಜುಲೈ 2021 ರಲ್ಲಿ ಪ್ರತಿಕ್ರಿಯೆಯನ್ನು ಪಡೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾತ್ರಾ ಅವರು ಜುಲೈ 16, 2021 ರಂದು ಕೇಂದ್ರ ಆರೋಗ್ಯ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆರ್.ಟಿ.ಐ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ PM ಕೇರ್ಸ್ ಫಂಡ್ ಮೂಲಕ ವೆಚ್ಚಗಳ ವಿವರಗಳನ್ನು ಕೋರಿದ್ದಾರೆ.



Join Whatsapp