ಪಿಎಂ ಟೆಲಿಪ್ರಾಂಪ್ಟರ್ ಭಾಷಣ । ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Prasthutha|

ನವದೆಹಲಿ: ವಿಶ್ವ ಆರ್ಥಿಕ ವೇದಿಕೆಯನ್ನುದ್ದೇಶಿಸಿ ವರ್ಚುವಲ್ ಆಗಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರ ಭಾಷಣವು ಟೆಲಿ ಪ್ರಾಂಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡ ವೀಡಿಯೋ ವಿವಿಧ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

- Advertisement -

ಈ ಕುರಿತು ವೀಡಿಯೋ ಪೋಸ್ಟ್ ಮಾಡಿ ಕೆಲವರು #ಟೆಲಿಪ್ರಾಂಪ್ಟರ್ ಪಿಎಂ #ರಿಯಲ್ ಪಪ್ಪು ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ನೀಡಿ ಟ್ರೋಲ್ ಮಾಡಿದರೆ ಮತ್ತೆ ಕೆಲವರು ಇದು ತಾಂತ್ರಿಕ ದೋಷ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಟೆಲಿಪ್ರಾಂಪ್ಟರ್ ಕೂಡ ಸುಳ್ಳಿನ ಸರಮಾಲೆಗಳನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಛೇಡಿಸಿದ್ದಾರೆ.

- Advertisement -

ನಡೆದಿದ್ದೇನು:

ವಿಶ್ವ ಆರ್ಥಿಕ ವೇದಿಕೆ ‘ದಾಮೋಸ್ ಅಜೆಂಡಾ 2022’ ಶೃಂಗಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನಿರ್ವಹಿಸಿದ ವಿಶೇಷ ಭಾಷಣಕ್ಕೆ ಟೆಲಿಪ್ರಾಂಪ್ಟರ್ ತಾಂತ್ರಿಕ ವೈಫಲ್ಯದಿಂದ ತೊಡಕು ಉಂಟಾಗಿದೆ.

ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸಿಬ್ಬಂದಿಯ ಕಡೆಗೆ ನೋಡಿದ ಮೋದಿ, ನಂತರದಲ್ಲಿ ಒಂದೆರಡು ಪದಗಳನ್ನು ಹೇಳಿ ಮತ್ತೆ ಪಕ್ಕಕ್ಕೆ ನೋಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಈ ನಡುವೆ ಸಿಬ್ಬಂದಿಯೋರ್ವರು ದಾಮೋಸ್ ನಲ್ಲಿರುವವರಿಗೆ ಧ್ವನಿ ಕೇಳಿಸುತ್ತಿದೆಯೇ ಎಂದು ಕೇಳಲು ಹೇಳುವುದು ಆ ವೀಡಿಯೋದಲ್ಲಿದೆ. ನಂತರ ಕ್ಯಾಮೆರಾದತ್ತ ಮುಖ ಮಾಡಿದ ಮೋದಿ ಏನನ್ನೋ ಹೇಳಲು ಯತ್ನಿಸುತ್ತಾರೆ. ಆದರೆ ಒಂದು ಮಾತನ್ನು ಆಡುವುದಿಲ್ಲ. ಇದಾದ ಬಳಿಕ ಕೇವಲ 10 ಸೆಕೆಂಡ್ ಗಳ ಕಾಲ ಮೌನವಹಿಸುತ್ತಾರೆ. ಈ ವೇಳೆ ಇಯರ್ ಫೋನ್ ಸರಿಪಡಿಸಿಕೊಂಡು ಧ್ವನಿ ಕೇಳುತ್ತಿದೆಯೇ? ಎಂದು ಹಿಂದಿಯಲ್ಲಿ ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಬ್ಲ್ಯುಇಎಫ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್, ಧ್ವನಿ ಕೇಳುತ್ತಿದೆ ಎಂದು ಉತ್ತರಿಸುತ್ತಾರೆ. ಮತ್ತೆ ಪ್ರಧಾನಿ ಮೋದಿ ತನ್ನ ಇಂಟರ್‌ಪ್ರಿಟೇಶನ್ ಕೇಳುತ್ತಿದ್ದಯೇ ಎನ್ನುತ್ತಾ, ನನಗೆ ನಿಮ್ಮ ಮಾತುಗಳು ಚೆನ್ನಾಗಿ ಕೇಳುತ್ತಿವೆ. ನಾವು ಈಗ ಅಧಿಕೃತವಾಗಿ ಕಾರ್ಯಕ್ರಮವನ್ನು ಪ್ರಾರಂಭಿಸಬಹುದು ಎಂದು ಶ್ವಾಬ್ ತಿಳಿಸುತ್ತಾರೆ. ನಂತರ ಪ್ರಧಾನಿ ಮೋದಿ ಭಾಷಣವನ್ನು ಹೊಸತಾಗಿ ಪ್ರಾರಂಭಿಸುತ್ತಾರೆ.

ಸೋಮವಾರದ ಟೆಲಿಪ್ರಾಂಪ್ಟರ್ ದೋಷದ ಹಿಂದಿನ ಸತ್ಯ ಏನೇ ಇದ್ದರೂ ಮೋದಿ ಟೆಲಿಪ್ರಾಂಪ್ಟರ್ ಇಲ್ಲದೆ ಮಾತನಾಡಲಾರರು ಎಂಬ ಅರ್ಥದಲ್ಲಿ ಕೆಲವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

Join Whatsapp