ದಯವಿಟ್ಟು ರಾಜೀನಾಮೆ ನೀಡಿ: ಉದ್ಯೋಗಿಗಳಿಗೆ ಈಮೇಲ್ ಮಾಡಿದ ಮಾರ್ಕ್ ಝುಕರ್ ಬರ್ಗ್

Prasthutha|

ವಾಷಿಂಗ್ಟನ್: ದಯವಿಟ್ಟು ರಾಜೀನಾಮೆ ನೀಡಿ ಎಂದು ಮಾರ್ಕ್ ಝುಕರ್ ಬರ್ಗ್ ಅವರು ಫೇಸ್ ಬುಕ್ ಸಿಬ್ಬಂದಿಗೆ ಕಟುವಾಗಿ ಸೂಚಿಸಿರುವ ಹಳೆಯ ಈಮೇಲ್’ವೊಂದು ಮಂಗಳವಾರ ಜಾಲತಾಣದಲ್ಲಿ ಹರಿದಾಡಿದೆ.
ಸಿಬ್ಬಂದಿಯು ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಜಾಲತಾಣದಲ್ಲಿ ಅರೆಬರೆ ಮಾಹಿತಿಗಳನ್ನು ಸೋರಿ ಬಿಡುತ್ತಿದ್ದಾರೆ. ಇದರಿಂದ ಸಿಇಓ ಝುಕರ್ ಬರ್ಗ್ ತುಮುಲಕ್ಕೆ ಒಳಗಾಗಿದ್ದಾರೆ. ಒಂದು ಟೆಕ್ಕ್ರಂಚ್ ಕತೆಯಲ್ಲಿ ಕಂಪೆನಿಯು ಗುಟ್ಟಾಗಿ ಮೊಬೈಲ್ ಫೋನ್ ತಯಾರಿಸುವುದಾಗಿ ಹೇಳಲಾಗಿದೆ. ಇದು ಕಂಪೆನಿಯ ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದಿದ್ದಾರೆ ಝುಕರ್ ಬರ್ಗ್.
“ನಾವು ಒಂದು ಮೊಬೈಲ್ ಫೋನ್ ತಯಾರಿಸುವುದಾಗಿ ಟೆಕ್ಕ್ರಂಚ್ ವೀಕೆಂಡ್ ಕತೆಯು ನಿಮಗೆ ಸಾಕಷ್ಟು ಹೇಳಿರಬಹುದು. ನಾವು ಯಾವುದೇ ಫೋನ್ ತಯಾರಿಸುತ್ತಿಲ್ಲ. ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಪ್ರಶ್ನೋತ್ತರದಲ್ಲೇ ತಿಳಿಸಿದ್ದೇನೆ. ನಿಜವಾಗಿ ಫೋನ್ ಆಪ್ ಗಳನ್ನು ಮಾಡುವುದು ಕಟ್ಟುವುದು ಹೆಚ್ಚು ಸಾಮಾಜಿಕವಾದುದಾಗಿದೆ” ಹೀಗೆಂದು ಝುಕರ್ ಬರ್ಗ್ ತನ್ನ ಸೆಪ್ಟೆಂಬರ್ 2010ರ ಈಮೇಲ್’ನಲ್ಲಿ ಹೇಳಿದ್ದಾರೆ.
“ಇದು ಬೆನ್ನಿಗೆ ಚೂರಿ ಹಾಕುವ ಕೆಲಸ. ಯಾರೆಲ್ಲ ಈ ಸೋರಿಕೆಗೆ ಕಾರಣರಾಗಿದ್ದೀರೋ ದಯವಿಟ್ಟು ಕೂಡಲೆ ನೀವು ರಾಜೀನಾಮೆ ನೀಡಿ ಎಂದು ಸಿಇಓ ಕೋಪದಿಂದ ಬರೆದಿದ್ದರು.
“ಕಂಪೆನಿಯ ಗುಟ್ಟನ್ನು ಜಗತ್ತಿಗೆ ಬಿಟ್ಟುಕೊಡುವುದಾದರೆ ನೀವು ರಾಜೀನಾಮೆ ಕೊಡಲೇಬೇಕು. ನೀವಾಗಿ ರಾಜೀನಾಮೆ ಕೊಡದಿದ್ದರೆ, ನಾವು ಹೇಗಾದರೂ ನಿಮ್ಮನ್ನು ಕಂಡು ಹಿಡಿಯುತ್ತೇವೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.
ಈಗ ಮೆಟಾ ಆಗಿರುವ ಫೇಸ್ ಬುಕ್ ಈಗೀಗ ಸಾವಿರಾರು ಸಿಬ್ಬಂದಿಯನ್ನು ಕೈಬಿಡುತ್ತಲೇ ಇದೆ. ಯುಎಸ್’ಎ ಕಂಪೆನಿಯ ಗುಣಮಟ್ಟ ಕಾಪಾಡಲು ಇದು ಅನಿವಾರ್ಯ ಎಂದಿದ್ದಾರೆ ಸಿಇಓ.
10,000 ಸಿಬ್ಬಂದಿಯನ್ನು ತೆಗೆಯುವುದಾಗಿಯೂ, 5,000 ಬರಿದಾಗಿರುವ ಹುದ್ದೆಗಳನ್ನು ತುಂಬುವುದಿಲ್ಲ ಎಂದೂ ಇತ್ತೀಚೆಗೆ ಜುಕರ್ ಬರ್ಗ್ ಹೇಳಿದ್ದರು.
2022ರಲ್ಲಿ ಮೆಟಾ ಹಣಕಾಸು ಹಿನ್ನಡೆ ಕಂಡಿತು. ಆಪಲ್ ದತ್ತಾಂಶ ಖಾಸಗಿತನ ನಿಯಮ ಬದಲಾಯಿತು, ಜಾಹೀರಾತು ಮುಗ್ಗರಿಸಿತು. ಹಾಗಾಗಿ ಫೇಸ್ ಬುಕ್ ವೆಚ್ಚ ಕಡಿತಕ್ಕೆ ಕೈ ಹಾಕಿದೆ.

Join Whatsapp