ನಿಗದಿತ ಸಮಯಕ್ಕೆ ಮೊದಲೇ 35 ಮಂದಿ ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ

Prasthutha|

ಅಮೃತಸರ: ಸಿಂಗಾಪುರಕ್ಕೆ ಹೋಗಬೇಕಿದ್ದ 35 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ.

- Advertisement -


ಒಂದು ಗಂಟೆ ಮೊದಲೇ ವಿಮಾನ ಹೇಗೆ ಹಾರಿ ಹೋಯಿತು ಎಂಬ ಬಗ್ಗೆ ತನಿಖೆ ನಡೆಸುವಂತೆ ಡಿಜಿಸಿಎ- ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಆದೇಶ ಮಾಡಿದೆ.
ಬುಧವಾರ ರಾತ್ರಿ 7.55ಕ್ಕೆ ಅಮೃತಸರದಿಂದ ಸಿಂಗಾಪುರಕ್ಕೆ ಸ್ಕೂಟ್ ಏರ್ ಲೈನ್ ವಿಮಾನ ಹೊರಡಬೇಕಿತ್ತು. ಆದರೆ ಮಧ್ಯಾಹ್ನ 3 ಗಂಟೆಗೇ ಅದು ಹೊರಟು ಬಿಟ್ಟಿದೆ. ಈ ಸಂಬಂಧ ವಿಮಾನಯಾನ ನಿಯಂತ್ರಣ ಪ್ರಾಧಿಕಾರವು ತನಿಖೆಯನ್ನು ಆರಂಭಿಸಿದೆ.


ಇದು ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಯಿತು. ಅಲ್ಲೇ ಪ್ರತಿಭಟನೆ ನಡೆಸಿದ ಪ್ರಯಾಣಿಕರು ನಿಲ್ದಾಣದ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು.
ವಿಮಾನಯಾನ ಪ್ರಾಧಿಕಾರದವರು ಈ ವಿಮಾನ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಮೇಲ್ ಮೂಲಕ ಎಲ್ಲ ಪ್ರಯಾಣಿಕರಿಗೂ ಬದಲಾವಣೆಯಾದ ಸಮಯವನ್ನು ಹೇಳಲಾಗಿತ್ತು ಎಂದು ತಿಳಿಸಿದ್ದಾರೆ.
“280 ಪ್ರಯಾಣಿಕರು ಆ ವಿಮಾನದಲ್ಲಿ ಸಿಂಗಾಪುರಕ್ಕೆ ಹೋಗಬೇಕಿತ್ತು. 30 ಪ್ರಯಾಣಿಕರನ್ನು ಬಿಟ್ಟು 253 ಮಂದಿಯನ್ನು ವಿಮಾನ ಕರೆದೊಯ್ದಿದೆ” ಎಂದು ಅಮೃತಸರ ವಿಮಾನ ನಿಲ್ದಾಣ ಪ್ರಾಧಿಕಾರದವರು ಹೇಳಿದ್ದಾರೆ.

- Advertisement -


ಏರ್ ಲೈನ್ ನವರ ಪ್ರಕಾರ ಸಮಯ ಬದಲಾದ ಬಗ್ಗೆ ಎಲ್ಲ ಪ್ರಯಾಣಿಕರಿಗೂ ಮಿಂಚಂಚೆ ಕಳುಹಿಸಲಾಗಿತ್ತು.
ಟ್ರಾವೆಲ್ ಏಜೆಂಟ್ ಒಬ್ಬರು 30 ಜನರ ಒಂದು ಗುಂಪಿಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅವರು ಸಮಯ ಬದಲಾದುದನ್ನು ತಾನು ಟಿಕೆಟ್ ಬುಕ್ ಮಾಡಿದವರಿಗೆ ತಿಳಿಸಿರಲಿಲ್ಲ ಎಂದು ಅಮೃತಸರ ವಿಮಾನ ನಿಲ್ದಾಣದ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಸ್ಕೂಟ್ ಏರ್ ಲೈನ್ ಸಿಂಗಾಪುರದ ಕಡಿಮೆ ದರದ ವಿಮಾನ ಸೇವೆಯಾಗಿದ್ದು ಅದು ಸಿಂಗಾಪುರ್ ಏರ್ ಲೈನ್ಸ್ ಮತ್ತು ಅಮೃತಸರ ವಿಮಾನ ನಿಲ್ದಾಣದ ಸಬ್ಸಿಡಿಯದಾಗಿದೆ, ಸಂಪೂರ್ಣ ಮಾಹಿತಿಯ ವರದಿ ನೀಡುವಂತೆ ಡಿಜಿಸಿಎ ಆದೇಶಿಸಿದೆ.
ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿತ್ತು. ದಿಲ್ಲಿಗೆ ಹೊರಟಿದ್ದ ಗೋ ಫಸ್ಟ್ ವಿಮಾನವು ಶಟಲ್ ಬಸ್ ನಲ್ಲಿ ಬರುತ್ತಿದ್ದ 55 ಜನರನ್ನು ಹಾಗೆಯೇ ಬಿಟ್ಟು ಹಾರಿಹೋಗಿತ್ತು. ನಾಲ್ಕು ಗಂಟೆಗಳ ಬಳಿಕ ಅವರಿಗೆ ಬೇರೆ ವಿಮಾನದಲ್ಲಿ ಸ್ಥಳಾವಕಾಶ ಮಾಡಿ ಕೊಡಲಾಯಿತು.
ಡಿಜಿಸಿಎ ಗೋ ಫಸ್ಟ್ ನ ಮುಖ್ಯ ಹಾರಾಟಾಧಿಕಾರಿಗೆ ನೋಟೀಸು ನೀಡಿತ್ತು. ಯಾಕೆ ನಿಯಂತ್ರಣ ನಿಯಮದಂತೆ ಕ್ರಮ ತೆಗೆದುಕೊಂಡಿಲ್ಲ ಎಮಬುದು ಗೊತ್ತಾಗಿಲ್ಲ.



Join Whatsapp