ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಿಮಾನ ಪತನ; ಓರ್ವ ಸಾವು, ಮೂವರಿಗೆ ಗಾಯ

Prasthutha|

ಸ್ಯಾಕ್ರಮೆಂಟೊ :ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಿಂಗಲ್ ಇಂಜಿನ್ ವಿಮಾನವೊಂದು ಪತನಗೊಂಡಿದ್ದು ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಲ್ಕು ಜನರಿದ್ದ ಸೆಸ್ನಾ 172 ವಿಮಾನವು ಮುರ್ರಿಯೆಟಾದ ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು.

- Advertisement -

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ನಡೆಸುತ್ತಿದೆ. ಡೌನ್ಟೌನ್ ಲಾಸ್ ಏಂಜಲೀಸ್ನ ಆಗ್ನೇಯಕ್ಕೆ ಸುಮಾರು 85 ಮೈಲಿಗಳಷ್ಟು ದೂರದಲ್ಲಿ ಘಟನೆ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನವು ಟೇಕ್ ಆಫ್ ಆದ ಕೂಡಲೇ ಘಟನೆ ಸಂಭವಿಸಿದೆ.

Join Whatsapp