ವಿಮಾನ ಅಪಘಾತವಾಗಿ 1 ತಿಂಗಳಾದರೂ ಅಮೆಜಾನ್​ ಕಾಡಿನಲ್ಲಿ 4 ಮಕ್ಕಳಿಗಾಗಿ ನಿರಂತರ ಹುಡುಕಾಡುತ್ತಿರುವ ಸೈನಿಕರು!

Prasthutha|

ಕೊಲಂಬಿಯಾ: ಸುಮಾರು ಒಂದು ತಿಂಗಳ ಹಿಂದೆ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದರು.

- Advertisement -

 ಇದೀಗ ಅರ್ಧ ತಿಂದಿರುವ ಹಣ್ಣು, ಮಗುವಿನ ಡೈಪರ್, ಒಂದು ಜತೆ ಶೂ ಪತ್ತೆಯಾಗಿರುವುದರಿಂದ ಒಂದು ತಿಂಗಳಾದರೂ ಮಕ್ಕಳು ಬದುಕಿರಬಹುದೆಂದು ಶಂಕಿಸಲಾಗಿದೆ.

ಮೇ 1 ರಂದು ಕೊಲಂಬಿಯಾದ ಆಗ್ನೇಯದಲ್ಲಿ ಸೆಸ್ನಾ 206 ಎಂಬ ಲಘು ವಿಮಾನ ಅಪಘಾತ ಸಂಭವಿಸಿ ಮೂವರು ಪ್ರಾಣಬಿಟ್ಟಿದ್ದರು. ಕೊಲಂಬಿಯಾದ ಅಮೆಜಾನ್​ನಲ್ಲಿರುವ ಸ್ಯಾನ್ ಜೋಸ್​ ಡೆಲ್​ ಗುವಿಯಾರ್ ಪಟ್ಟಣಕ್ಕೆ ಹೊರಟಿದ್ದ ವಿಮಾನದ ಎಂಜಿನ್​ನಲ್ಲಿ ಸಮಸ್ಯೆ ಕಾಣಿಸಿಕೊಂಡು ವಿಮಾನವು ರಾಡಾರ್​ನಿಂದ ಕಣ್ಮರೆಯಾಗಿತ್ತು.

- Advertisement -

ಮೇ15, 16 ರಂದು ಮೂವರ ಮೃತದೇಹವನ್ನು ಮಿಲಿಟರಿ ಪತ್ತೆ ಮಾಡಿತ್ತು. ಮಕ್ಕಳಾದ ಲೆಸ್ಲಿ(13), ಸೊಲಿನಿ(9), ಟಿಯೆನ್ ನೊರಿಯಲ್(4) ಮತ್ತು 11 ತಿಂಗಳ ಮಗು ಕ್ರಿಸ್ಟಿನ್ ನಾಪತ್ತೆಯಾಗಿದ್ದರು. ಸುಮಾರು 200 ಸೈನಿಕರು ಮಕ್ಕಳಿಗಾಗಿ ತೀವ್ರ ಶೋಧಕಾರ್ಯ ಮುಂದುವರೆಸಿದ್ದಾರೆ. ಮೇ 17 ರಂದು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿ ಹಬ್ಬಿತ್ತು.

Join Whatsapp