ಬೆಂಗಳೂರು: ಪೊಲೀಸ್ ಇನ್ಸ್​ಪೆಕ್ಟರ್ ವಿರುದ್ಧ FIR ದಾಖಲು

Prasthutha|

ಬೆಂಗಳೂರು: ಪುಲಿಕೇಶಿನಗರ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ಕಿರಣ್ ಅವರ ವಿರುದ್ಧ ಎಫ್ಐಆರ್ (FIR)​ ದಾಖಲಾಗಿದೆ.

- Advertisement -

ಇನ್ಸ್​ಪೆಕ್ಟರ್ ಕಿರಣ್ ಅವರು ವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ ಮಾಡಿದ್ದಾರೆ ಎಂದು ಹರೀಶ್ ಫರ್ನಾಂಡೀಸ್ ಎಂಬವರು 2016ರಲ್ಲಿ ನ್ಯಾಯಾಲಯಕ್ಕೆ ಪಿಸಿಆರ್ ಸಲ್ಲಿದ್ದರು. ಈ ಹಿನ್ನೆಲೆ ಕೋರ್ಟ್ ಸೂಚನೆ ಮೇರೆಗೆ ಇದೀಗ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

 2016ರಲ್ಲಿ ಮನೆ ಖಾಲಿ ಮಾಡುವ ವಿಚಾರಕ್ಕೆ ಸಹೋದರರಾದ ಹರೀಶ್ ಫರ್ನಾಂಡೀಸ್ ಮತ್ತು ವಸಂತ್ ಫರ್ನಾಂಡೀಸ್ ಎಂಬವರ ನಡುವೆ ಜಗಳ ನಡೆದಿತ್ತು. ಈ ಗಲಾಟೆಯಲ್ಲಿ ಇನ್ಸ್​ಪೆಕ್ಟರ್ ಕಿರಣ್ ಮಧ್ಯಪ್ರವೇಶಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು.

- Advertisement -

ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ 2023ರ ಮೇ 19ರಂದು ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಹರೀಶ್​​ ಫರ್ನಾಂಡೀಸ್​​ ಸಹೋದರ ವಸಂತ್ ಫರ್ನಾಂಡೀಸ್ ಹಾಗೂ ಪತ್ನಿ ಮೆರಿಟೋ ವಿರುದ್ಧವೂ ದೂರ ದಾಖಲಾಗಿದೆ.