ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ: ಮೆಹಬೂಬಾ ಮುಫ್ತಿ ಆರೋಪ

Prasthutha|

ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೆಪ್ಟೆಂಬರ್ 29 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಭೇಟಿ ನೀಡಲು ಯೋಜನೆ ಹಾಕುತ್ತಿದ್ದಾಗ ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ದೂರಿದ್ದಾರೆ.

- Advertisement -

ಸೆಪ್ಟೆಂಬರ್ 28 ರಂದು ಪುಲ್ವಾಮಾದ ಟ್ರಾಲ್ ಪಟ್ಟಣದಲ್ಲಿ ಸೇನಾ ಸಿಬ್ಬಂದಿ ನಮ್ಮ ಕುಟುಂಬದ ಮಹಿಳೆಯರು ಸೇರಿದಂತೆ ಸದಸ್ಯರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಫ್ತಿ ಅವರು ಸೆಪ್ಟೆಂಬರ್ 29 ರಂದು ಕುಟುಂಬದ ಸದಸ್ಯರನ್ನು ಭೇಟಿಯಾಗಲು ಸಿದ್ದತೆ ನಡೆಸುತ್ತಿದ್ದಾಗ ಈಗ ಮತ್ತೆ ಗೃಹ ಬಂಧನ ವಿಧಿಸಲಾಗಿದೆ ಎಂದು ದೂರಿದ್ದಾರೆ.

ಗುಪ್ಕರ್ ರಸ್ತೆಯಲ್ಲಿರುವ ಪಿಡಿಪಿ ಮುಖ್ಯಸ್ಥರ ನಿವಾಸದ ಮುಖ್ಯ ದ್ವಾರವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ತೋರಿಸುವ ಚಿತ್ರಗಳನ್ನು ಟ್ವಿಟ್ಟರ್ ಪೋಸ್ಟ್ ಮಾಡಿ ಗೃಹಬಂಧನದ ಕುರಿತು ಅವರು ಮಾಹಿತಿ ನೀಡಿದ್ದಾರೆ.

- Advertisement -

ಸೆಪ್ಟೆಂಬರ್ 28 ರಂದು ಮುಫ್ತಿ ಟ್ವೀಟ್ ಮಾಡಿ “ಟ್ರಾಲ್ ನ ಯಾಗವಾನಿ ಕ್ಯಾಂಪ್ ನ ಸೈನ್ಯವು ಮನೆಗಳನ್ನು ಧ್ವಂಸಮಾಡಿದೆ ಮತ್ತು ನಿನ್ನೆ ರಾತ್ರಿ ಒಂದು ಕುಟುಂಬದ ಸದಸ್ಯರ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಈ ಹಳ್ಳಿಯ ನಾಗರಿಕರಿಗೆ ಸೇನೆಯು ಥಳಿಸುತ್ತಿರುವುದು ಇದೇ ಮೊದಲಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.



Join Whatsapp