ಗಾಜಿಯಾಬಾದ್ ನಲ್ಲಿ ಪಿಟ್ಬುಲ್, ರಾಟ್ವೀಲರ್ ನಾಯಿ ತಳಿಗಳಿಗೆ ನಿಷೇಧ 

Prasthutha|

ಗಾಜಿಯಾಬಾದ್ : ಸಾಕು ನಾಯಿಗಳಿಂದ ಅನೇಕರು ಗಾಯಗೊಂಡ ಘಟನೆಗಳ ನಂತರ, ಗಾಜಿಯಾಬಾದ್ ಆಡಳಿತವು ಪಿಟ್ಬುಲ್, ರಾಟ್ವೀಲರ್ ಮತ್ತು ಡೊಗೊ ಅರ್ಜೆಂಟಿನೊ ತಳಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳದಂತೆ ನಿವಾಸಿಗಳಿಗೆ ನಿಷೇಧ ಹೇರಿದೆ.

- Advertisement -

ಇತ್ತೀಚೆಗೆ ಗಾಜಿಯಾಬಾದ್ ನ ವಿವಿಧ ವಸತಿ ಪ್ರದೇಶಗಳಲ್ಲಿ ಹಲವಾರು ನಾಯಿ ಕಡಿತ ಘಟನಗಳು ವರದಿಯಾದ ಹಿನ್ನೆಲೆಯಲ್ಲಿ ಈ ಆದೇಶಗಳು ಹೊರಬಂದಿವೆ.

ನಗರದ ಮುನ್ಸಿಪಲ್ ಕಾರ್ಪೊರೇಷನ್ ಸರಣಿ ಈ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾಕುಪ್ರಾಣಿಗಳ ಮಾಲೀಕರನ್ನು ಉದ್ದೇಶಿಸಿ, ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ಸಾಕು ನಾಯಿಗಳನ್ನು ಸಾಕಲು ಅವಕಾಶವಿಲ್ಲ ಎಂದು ಹೇಳಿದೆ.

- Advertisement -

ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳಿಗೆ ಪರವಾನಿಗೆ ಪಡೆಯುವುದು ಅಗತ್ಯ, ಇದನ್ನು ನವೆಂಬರ್ 1, 2022 ರಿಂದ ನೀಡಲಾಗುವುದು. ಈಗ, ಅವರು ಎರಡು ತಿಂಗಳೊಳಗೆ ತಮ್ಮ ನಾಯಿಗಳ ನೋಂದಣಿಯನ್ನು ಪಡೆಯಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಎತ್ತರದ ಕಟ್ಟಡಗಳ ನಿವಾಸಿಗಳಾದ ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಹೊರಗೆ ಕರೆದೊಯ್ಯಲು ಸರ್ವೀಸ್ ಲಿಫ್ಟ್ ಗಳನ್ನು ಬಳಸಬೇಕಾಗುತ್ತದೆ. ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಆದೇಶಗಳ ಪ್ರಕಾರ ಸಾಕು ನಾಯಿಗಳು ಸಾರ್ವಜನಿಕವಾಗಿದ್ದಾಗ ಮೂತಿಯನ್ನು  ಮುಚ್ಚುವ ಮಾಸ್ಕ್ ( muzzle) ಧರಿಸಬೇಕಾಗುತ್ತದೆ ಎಂದು ತಿಳಿಸಿದೆ.

Join Whatsapp