ದೆಹಲಿಯಲ್ಲಿ ಪ್ರತಿಭಟನೆ ನಿರತರಾಗಿರುವ ಅನ್ನದಾತರಿಗೆ ಕೇರಳದ ರೈತರಿಂದ ಟ್ರಕ್ ತುಂಬಾ ಅನಾನಾಸು ರವಾನೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಕೊರೆವ ಚಳಿಯಲ್ಲೂ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ, ಕೇರಳದ ರೈತರು ಟ್ರಕ್ ತುಂಬಾ ಅನಾನಾಸು (ಫೈನಾಪಲ್)ಗಳನ್ನು ಕಳುಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಿರತರಾಗಿರುವ ರೈತರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ದೇಶಾದ್ಯಂತ ಜನರು ಕಳುಹಿಸುತ್ತಿದ್ದು, ಕೇರಳ ರೈತರೂ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

- Advertisement -

ವಾಝಕ್ಕುಳಂ ಪೈನಾಪಲ್’ ಎಂದೇ ಪ್ರಸಿದ್ಧಿ ಪಡೆದಿರುವ ವಾಝಕ್ಕುಳಂ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಸುಮಾರು 20 ಟನ್ ಗಿಂತಲೂ ಹೆಚ್ಚು ಪೈನಾಪಲ್ ಅನ್ನು ಟ್ರಕ್ ನಲ್ಲಿ ತುಂಬಿಸಿ ದೆಹಲಿಗೆ ಕಳುಹಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಪೈನಾಪಲ್ ಬೆಳೆಯುವ ರೈತರ ಸಂಘ ಈ ಕೊಡುಗೆ ನೀಡಿದೆ.

- Advertisement -