ರೈತರ ಪ್ರತಿಭಟನೆ | ಬೇಡಿಕೆ ಈಡೇರುವ ವರೆಗೂ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ನೀಡದಂತೆ ಕರೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಿರತರಾಗಿರುವ ರೈತರು ಈಗ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವ ವರೆಗೂ ಹರ್ಯಾಣದಲ್ಲಿ ಟೋಲ್ ರಹಿತ ವಾಹನ ಪ್ರಯಾಣಕ್ಕೆ ರೈತರು ಕರೆ ನೀಡಿದ್ದಾರೆ.

- Advertisement -

ಆರಂಭದಲ್ಲಿ ಡಿ.25ರಿಂದ ಡಿ.27ರ ವರೆಗೆ ಹೆದ್ದಾರಿಯಲ್ಲಿ ರೈತರು ಟೋಲ್ ಶುಲ್ಕ ನೀಡದಂತೆ ಕರೆ ನೀಡಿದ್ದರು. ಇದೀಗ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಿರತರಾಗಿರುವ ರೈತರನ್ನು ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಧಾವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಅನಿರ್ದಿಷ್ಟಾವಧಿ ವರೆಗೆ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸದಂತೆ ರೈತ ಮುಖಂಡರು ಕರೆ ನೀಡಿದ್ದಾರೆ.

Join Whatsapp