►ಎಕ್ಸಿಟ್ ಪೋಲ್ ಸಮೀಕ್ಷೆ
ಕಳೆದ ಕೋವಿಡ್ ವೇಳೆಯಲ್ಲಿ ಹಲವು ಜನಪರ ಕೆಲಸಗಳಿಂದಾಗಿ ಕೇರಳದ ಜನತೆಯ ಮನ ಗೆದ್ದಿರುವ ಎಡರಂಗದ ಸರಕಾರವನ್ನು ಎರಡನೇ ಅವಧಿಗೆ ಮತ್ತೆ ಜನರು ಅಧಿಕಾರಕ್ಕೇರಿಸಲಿದ್ದಾರೆಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದೆ. ರಿಪಬ್ಲಿಕ್ – ಸಿಎನ್ಎಕ್ಸ್ ಸಮೀಕ್ಷೆಯಲ್ಲಿ ಎಡರಂಗ 72 ರಿಂದ 80 ಸೀಟುಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಅದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 58 ರಿಂದ 64 ಸೀಟುಗಳನ್ನು ಗೆಲ್ಲಲಿದೆ ಎಂದಿದೆ. ಮಾತ್ರವಲ್ಲ ಬಿಜೆಪಿ 1 ರಿಂದ 5 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಎಡರಂಗ ಭರ್ಜರಿಯಾಗಿ ಜಯಗಳಿಸಲಿದೆ ಎಂದು ಹೇಳಿದೆ. ಎಡರಂಗ 104 ರಿಂದ 120 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ ಎಂದಿದೆ. ಯುಡಿಎಫ್ ಕೇವಲ 20 ರಿಂದ 36 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮೇ ಎರಡರಂದು ಕೇರಳದ ಚುನಾವಣಾ ಫಲಿತಾಂಶ ಹೊರ ಬರಲಿದ್ದು, ಅಂತಿಮ ವಿಜಯ ಯಾರಿಗೆ ಎಂದು ಸ್ಪಷ್ಟವಾಗಿ ತಿಳಿಯಲಿದೆ.