ಎನ್’ಸಿಇಆರ್’ಟಿ ಪಠ್ಯ ಪುಸ್ತಕ ಪರಿಷ್ಕರಣೆಯು ಕೇಸರೀಕರಣದ ಮುಂದುವರಿದ ಭಾಗ: ಪಿಣರಾಯಿ ವಿಜಯನ್

Prasthutha|

ಕೊಚ್ಚಿ: ಎನ್’ಸಿಇಆರ್’ಟಿ 12ನೇ ತರಗತಿಯ ಪಠ್ಯ ಪುಸ್ತಕದಿಂದ ಕೆಲವು ಭಾಗಗಳನ್ನು ತೆಗೆದು ಹಾಕುವ ಪರಿಷ್ಕರಣೆಯನ್ನು ತೀವ್ರವಾಗಿ ಖಂಡಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದನ್ನು ಕಲಿಕಾ ಪುಸ್ತಕಗಳನ್ನು ಪೂರ್ಣ ಕೇಸರೀಕರಿಸುವ ಉದ್ದೇಶದ್ದಾಗಿದೆ ಎಂದು ಟೀಕಿಸಿದ್ದಾರೆ.

- Advertisement -


ಕೆಲವರಿಗೆ ಪಥ್ಯವಲ್ಲ ಎಂಬ ಕಾರಣಕ್ಕೆ ಇತಿಹಾಸ ಪಾಠದಿಂದ ಕೆಲವು ಭಾಗವನ್ನು ತೆಗೆದು ಹಾಕಿದ ಕೂಡಲೆ ಚರಿತ್ರೆಯು ಬದಲಾಗುವುದಿಲ್ಲ ಎಂದು ಕೇರಳದ ಮುಖ್ಯಮಂತ್ರಿ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಪಾಠ ಪುಸ್ತಕದಿಂದ ಕೆಲವು ಭಾಗವನ್ನು ತೆಗೆದು ಹಾಕುವುದು ಒಂದು ರಾಜಕೀಯ ನಡೆಯಾಗಿದ್ದು ಅದನ್ನು ವಿರೋಧಿಸಬೇಕು ಮತ್ತು ಮತ್ತು ಖಂಡಿಸಬೇಕು. ಇದರ ಹಿಂದಿನ ಉದ್ದೇಶ ಸಂಪೂರ್ಣ ಕೇಸರೀಕರಣ ಮುಖ್ಯಮಂತ್ರಿ ಹೇಳಿದ್ದಾರೆ.
12ನೇ ತರಗತಿಯ ರಾಜಕೀಯ ವಿಜ್ಞಾನ ಪಾಠ ಪುಸ್ತಕದಿಂದ ಗಾಂಧೀಜಿ ಕೊಲೆಯ ಭಾಗ, ಆರೆಸ್ಸೆಸ್ ನಿಷೇಧ ಆದುದನ್ನು ತೆಗೆದು ಹಾಕುವುದು ಯಾರಿಗೆ ಬೇಕಾಗಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಷಯವಾಗಿದೆ. ಅದೇ ತರಗತಿಯ ಇತಿಹಾಸ ಪಾಠದಿಂದ ಮೊಗಲರ ಚರಿತ್ರೆ ತೆಗೆದು ಹಾಕಿರುವುದರ ಉದ್ದೇಶ ಕೂಡ ಅದೇ ಎಂದು ಪಿಣರಾಯಿ ತಿಳಿಸಿದ್ದಾರೆ.
“ಮೊಗಲರ ಚರಿತ್ರೆ ಇಲ್ಲದ ಮಧ್ಯ ಕಾಲೀನ ಭಾರತದ ಚರಿತ್ರೆ ಅಪೂರ್ಣ. ಸಂಘ ಪರಿವಾರವು ಮೊದಲಿನಿಂದಲೂ ಮಧ್ಯಕಾಲೀನ ಭಾರತದ ಚರಿತ್ರೆಯನ್ನು ತಿರುಚುತ್ತಲೇ ಬಂದಿದೆ.
ಸಂಘ ಪರಿವಾರದವರಿಗಾಗಿ ಈ ಚರಿತ್ರೆ ಭಾಗಗಳನ್ನು ಎನ್’ಸಿಇಆರ್’ಟಿ ತೆಗೆದುಹಾಕಿ ನಕಲಿ ಇತಿಹಾಸಗಳನ್ನು ಸೇರಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ಆಪಾದಿಸಿದರು.
ಸಂಘ ಪರಿವಾರವು ಪಠ್ಯ ಪುಸ್ತಕಗಳ ಮೂಲಕ ದ್ವೇಷ ರಾಜಕಾರಣವನ್ನು ಮಕ್ಕಳ ತಲೆಯಲ್ಲಿ ತುಂಬಲು ಈ ಹುನ್ನಾರ ನಡೆಸಿದೆ ಎಂದು ಹಿರಿಯ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕ ಅಭಿಪ್ರಾಯಿಸಿದರು.


ಆರೆಸ್ಸೆಸ್ ಪ್ರಣೀತ ವಿಕೃತ ದಾರಿಯ ಚರಿತ್ರೆಯನ್ನು ಎನ್ ಸಿಇಆರ್ ಟಿ ಪ್ರಾಯೋಜಿಸುತ್ತಿದೆ. ಇದನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು. ಇಲ್ಲದಿದ್ದರೆ ಸಂವಿಧಾನಬದ್ಧ ಜಾತ್ಯತೀತ ಶಿಕ್ಷಣಕ್ಕೆ ಕುತ್ತು ಬರುತ್ತದೆ ಎಂದು ಪಿಣರಾಯಿ ಹೇಳಿದರು.
ಕೇಂದ್ರವು ಚರಿತ್ರೆಯನ್ನು ವಿಕೃತಿಯಿಂದ ತುಂಬುತ್ತಿದೆ- ಕಾಂಗ್ರೆಸ್ ಖಂಡನೆ
ಎನ್’ಸಿಇಆರ್’ಟಿ ಮುಖ್ಯಸ್ಥರಾದ ದಿನೇಶ್ ಸಕ್ಲಾನಿಯವರು ಕಳೆದ ಜೂನ್ ನಲ್ಲಿ ಈ ವರ್ಷ ಪಠ್ಯವನ್ನು ಟ್ರಿಮ್ ಮಾಡಿ ಸುಧಾರಿಸುವುದಾಗಿ ಹೇಳಿದ್ದರು.

- Advertisement -


ಇತ್ತೀಚೆಗೆ ಎನ್ ಸಿಇಆರ್ ಟಿ 12ನೆ ತರಗತಿಯ ಇತಿಹಾಸ ಪಾಠದಿಂದ ಗಾಂಧೀಜಿಯವರ ಹಿಂದೂ ಮುಸ್ಲಿಂ ಒಗ್ಗಟ್ಟು ಹಿಂದೂ ಉಗ್ರವಾದಕ್ಕೆ ಕಾರಣವಾಯಿತು ಎಂದು ಇದ್ದುದನ್ನು ತೆಗೆದಿದೆ. ಗಾಂಧೀಜಿ ಕೊಲೆಯ ಬಳಿಕ ಹೇಗೆ ಆರೆಸ್ಸೆಸ್ ನಿಷೇಧಿಸಲಾಯಿತು ಎಂಬುದನ್ನೂ ಪಾಠದಿಂದ ತೆಗೆಯಲಾಗಿದೆ. ಈ ಪರಿಷ್ಕರಣೆಯು ತೀವ್ರ ಟೀಕೆಗೆ ಒಳಗಾಗಿದೆ.
ಗಾಂಧೀಜಿಯವರ ಕೊಲೆಯು ದೇಶದ ಕೋಮು ಪರಿಸ್ಥಿತಿಯ ಮೇಲೆ ಜಾದೂ ಪರಿಣಾಮ ಬೀರಿದೆ. ಹಿಂದೂ ಮುಸ್ಲಿಂ ಒಗ್ಗಟ್ಟು ಹಿಂದೂ ಉಗ್ರ ವಾದಕ್ಕೆ ದಾರಿಯಾಯಿತು ಎಂಬ ಗಾಂಧೀಜಿಯವರ ಅನ್ವೇಷಣೆ, ಗಾಂಧೀಜಿ ಕೊಲೆಯ ಬಳಿಕ ಆರೆಸ್ಸೆಸ್ ನಿಷೇಧ ಈ ಭಾಗಗಳನ್ನು ಉದ್ದೇಶಪೂರ್ವಕವಾಗಿ ಬಿಡಲಾಗಿದೆ.
11ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಗುಜರಾತ್ ಗಲಭೆ ಬಗೆಗಿನ ವಿಷಯ ಕೈಬಿಡಲಾಗಿದೆ. 2002ರ ಗುಜರಾತ್ ಗಲಭೆಯ ಉಲ್ಲೇಖವನ್ನು 12 ತರಗತಿಯ ಪಾಠದಿಂದ ತೆಗೆದ ಬಳಿಕ ಎನ್ ಸಿಇಆರ್ ಟಿ ಇಲ್ಲೂ ಅದನ್ನು ನೀಗಿದೆ.



Join Whatsapp