ದುಬೈ: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ| ನಾಲ್ವರು ಏಷ್ಯನ್ನರಿಗೆ 2 ವರ್ಷ ಜೈಲು

Prasthutha|

ದುಬೈ: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೈದ ನಾಲ್ವರು ಏಷ್ಯನ್ನರಿಗೆ ದುಬೈ ಕ್ರಿಮಿನಲ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

- Advertisement -

ಕಳೆದ ಡಿಸೆಂಬರ್‌ನಲ್ಲಿ ದೇರಾ ನೈಫ್ ಪ್ರದೇಶದ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 7,09,000 ದಿರ್ಹಮ್‌ ಹಣ ದರೋಡೆ ಮಾಡಿದ ಪ್ರಕರಣದಲ್ಲಿ ನಾಲ್ವರು ಏಷ್ಯಾ ಮೂಲದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ 7,09,000 ದಿರ್ಹಮ್‌ ದಂಡ ವಿಧಿಸಲಾಗಿದೆ.

“ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಅಂಗಡಿಗೆ ಪ್ರವೇಶಿಸಿದ ನಾಲ್ವರ ತಂಡ ಲಾಕರ್ ತೆರೆಯುವಂತೆ ಒತ್ತಾಯಿಸಿದರು. ನಂತರ ಲಾಕರ್‌ನಿಂದ 7,09,000 ದಿರ್ಹಮ್ ಲೂಟಿ ಮಾಡಿ ಜಾಗ ಖಾಲಿ ಮಾಡಿದ್ದಾರೆ. ನಾನು ಆ ಸಮಯದಲ್ಲಿ ಅಂಗಡಿಯಲ್ಲಿ ಇರಲಿಲ್ಲ. ನಂತರ ಅಂಗಡಿಗೆ ಬಂದಾಗ ನೌಕರರು ಭಯಭೀತರಾಗಿದ್ದರು. ಹಣ ಇಟ್ಟಿದ್ದ ಲಾಕರ್ ಕೂಡ ಖಾಲಿಯಾಗಿ ತೆರೆದುಕೊಂಡಿತ್ತು” ಎಂದು ಅಂಗಡಿ ಮಾಲೀಕರು ದೂರು ನೀಡಿದ್ದರು.

- Advertisement -

ತನಿಖಾ ತಂಡವು ಅಪರಾಧ ನಡೆದ ಸ್ಥಳದಿಂದ ಸಿಸಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ಪುರಾವೆಗಳನ್ನು ಸಂಗ್ರಹಿಸಿದೆ. ನಂತರ, ನಾಲ್ವರನ್ನೂ ಬಂಧಿಸಲಾಯಿತು. ಆರೋಪಿಗಳ ಬಳಿ 6,00,000 ದಿರ್ಹಮ್ ಪತ್ತೆಯಾಗಿದ್ದು, ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ ಕದ್ದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಸಹೋದರರಾಗಿದ್ದಾರೆ.



Join Whatsapp