ಪಡಿತರ ಚೀಟಿಗಳಲ್ಲಿ ಯೇಸು ಕ್ರಿಸ್ತ, ಹಿಂದೂ ದೇವತೆಗಳ ಫೋಟೋ…!

Prasthutha|

ರಾಮನಗರ: ಯೇಸು ಕ್ರಿಸ್ತನ ಹಾಗೂ ಹಿಂದೂ ದೇವತೆಗಳ ಚಿತ್ರವನ್ನು ಮುದ್ರಿಸಲಾಗಿರುವ ಪಡಿತರ ಚೀಟಿಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.

- Advertisement -


ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳ ಪಡಿತರ ಚೀಟಿಗಳ ಹಿಂಭಾಗದಲ್ಲಿ ಯೇಸು ಕ್ರಿಸ್ತನ ಫೋಟೋ ಇದ್ದು, ದೊಡ್ಡಾಲಹಳ್ಳಿ ಗ್ರಾಮದ ಸ್ಟುಡಿಯೋವೊಂದರಲ್ಲಿ ರೇಷನ್‌ ಕಾರ್ಡ್‌ ಲ್ಯಾಮಿನೇಷನ್‌ ಮಾಡಿಕೊಡುವಾಗ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.


ಪಡಿತರ ಚೀಟಿ ಹಿಂದೆ ಯೇಸು ಕ್ರಿಸ್ತನ ಫೋಟೊ ಮುದ್ರಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

- Advertisement -


ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಇಲಾಖೆ ಉಪನಿರ್ದೇಶಕಿ ರಮ್ಯಾ, ಸರ್ಕಾರ ವಿತರಿಸುವ ಪಡಿತರ ಚೀಟಿಗಳು ರಾಜ್ಯದಾದ್ಯಂತ ಏಕರೂಪದಲ್ಲಿದ್ದು, ಅದರಲ್ಲಿ ಯಾವುದೇ ದೇವರ ಚಿತ್ರ ಬಳಸಲು ಅವಕಾಶ ಇಲ್ಲ. ಇದು ಅಧಿಕೃತ ಕಾರ್ಡ್‌ ಅಲ್ಲ. ಲ್ಯಾಮಿನೇಷನ್‌ ವೇಳೆ ಕೆಲವರು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.


‘ನಮ್ಮ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿ ಕಾರ್ಡ್ ವಿತರಣೆ ಆಗಿಲ್ಲ. ಅಂತಹ ಕಾರ್ಡ್‌ ಬಳಕೆಯೂ ಕಂಡುಬಂದಿಲ್ಲ. ಇದರ ಫೋಟೊಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಪೊಲೀಸ್‌ ತನಿಖೆಗೆ ಸೂಚಿಸಿದ್ದೇನೆ. ಬಳಕೆ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಕನಕಪುರ ತಹಶೀಲ್ದಾರ್‌ ವಿ.ಆರ್. ವಿಶ್ವನಾಥ್‌ ಪ್ರತಿಕ್ರಿಯಿಸಿದರು.



Join Whatsapp