‘ಕ್ಯಾನ್ಸರ್’ಗೆ ಮೂಲ’: ಶಾಂಪೂ ಸೇರಿದಂತೆ 32 ಉತ್ಪನ್ನಗಳನ್ನು ಹಿಂಪಡೆದ P&G ಕಂಪನಿ !

Prasthutha|

ವಾಷಿಂಗ್ಟನ್: ಮನುಷ್ಯರ ದೇಹದಲ್ಲಿ ಕ್ಯಾನ್ಸರ್’ಗೆ ಕಾರಣವಾಗಬಹುದಾದಷ್ಟು ಅಪಾಯಕಾರಿ ಪ್ರಮಾಣದ ರಾಸಾಯನಿಕ ‘ಅಂಶ’ಗಳು ಕಂಡು ಬಂದ ಹಿನ್ನೆಲೆಯಲ್ಲಿ ‘ದಿ ಪ್ರೋಕ್ಟರ್ & ಗ್ಯಾಂಬೆಲ್ – P&G ಕಂಪನಿ’ಯು ತನ್ನ 32 ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಶಾಂಪೂ, ಕಂಡೀಷನರ್ ಹಾಗೂ ಸುಗಂಧ ದ್ರವ್ಯಗಳು ಸೇರಿದಂತೆ ಒಟ್ಟು 32 ಉತ್ಪನ್ನಗಳನ್ನು ಅಮೆರಿಕ ಹಾಗೂ ಕೆನಡಾ ದೇಶಗಳ ಮಾರುಕಟ್ಟೆಯಿಂದ ಹಿಂಪಡೆಯುತ್ತಿರುವುದಾಗಿ P&G ಕಂಪನಿ ಹೇಳಿದೆ.

- Advertisement -

P&G ಕಂಪನಿಯ ಜನಪ್ರಿಯ ಉತ್ಪನ್ನಗಳಾದ ಪ್ಯಾಂಟೀನ್ ಶ್ಯಾಂಪೂ, ಓಲ್ಡ್ ‘ಸ್ಪೈಸ್ ಸ್ಪ್ರೇ ಹಾಗೂ ಮಹಿಳೆಯರ ನೆಚ್ಚಿನ ‘ಸೀಕ್ರೆಟ್ ಪೌಡರ್ ಫ್ರೆಶ್’ ಉತ್ಪನ್ನಗಳಲ್ಲಿ ಕ್ಯಾನ್ಸರ್ ಜನಕ ದ್ರವ್ಯದ ಪ್ರಮಾಣ ಹೆಚ್ಚಿರುವುದಾಗಿ ಕನೆಕ್ಟಿಕಟ್’ನ ಸ್ವತಂತ್ರ ಪ್ರಯೋಗಾಲಯ ‘ವಲಿಶ್ಯೂರ್’ನಲ್ಲಿ ನಡೆಸಿದ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ 32 ಉತ್ಪನ್ನಗಳನ್ನು ಹಿಂಪಡೆಯುತ್ತಿರುವುದಾಗಿ P&G ಕಂಪನಿ ಹೇಳಿದೆ.

P&G ವಿರುದ್ಧ ಗ್ರಾಹಕರಿಂದ ಮೊಕದ್ದಮೆ ದಾಖಲು

- Advertisement -

ಕ್ಯಾನ್ಸರ್’ಗೆ ಕಾರಣವಾಗುವ ರಾಸಾಯನಿಕಗಳನ್ನು ಬಳಸಿರುವ ಬಗ್ಗೆ ಪ್ರಯೋಗಾಲಯದ ವರದಿ ಹೊರಬರುತ್ತಿದ್ದಂತೆ P&G ಕಂಪನಿ ವಿರುದ್ಧ ಗ್ರಾಹಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನ್ಸಿನಾಟಿ ಸೇರಿದಂತೆ ಅಮೆರಿಕದ ವಿವಿಧ ನಗರಗಳಲ್ಲಿ P&G ಕಂಪನಿ ವಿರುದ್ಧ ಈಗಾಗಲೇ 17ಕ್ಕೂ ಹೆಚ್ಚು ಫೆಡರಲ್ ಮೊಕದ್ದಮೆಗಳು ದಾಖಲಾಗಿದ್ದು, ನಿರ್ದ್ಯಾಕ್ಷಿಣ್ಯ ಕ್ರಮ ತೆಗದುಕೊಳ್ಳುವಂತೆ ಒತ್ತಾಯಿಸಲಾಗಿದೆ. ಕೆಂಟುಕಿ ನಿವಾಸಿ ಒಹಿಯೊ ಎಂಬಾಕೆ, ತಾನು ಕಳೆದ ಎರಡು ವರ್ಷಗಳಿಂದ ‘ಸೀಕ್ರೆಟ್ ಸ್ಪ್ರೇ’ ಉಪಯೋಗಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



Join Whatsapp