ಮನೆಯ ಗೇಟು ಜಿಗಿದು ಸಾಕುನಾಯಿಯನ್ನು ಎಳೆದೊಯ್ದ ಚಿರತೆ: ವೀಡಿಯೋ ವೈರಲ್

Prasthutha|

ರಾತ್ರಿ ವೇಳೆಯಲ್ಲಿ ಚಿರತೆಯೊಂದು ಮನೆಯೊಂದರ ಗೇಟಿನ ಮೇಲೆ ಜಿಗಿದು ಸಾಕು ನಾಯಿಯನ್ನು ಎಳೆದೊಯ್ಯುವ CCTV ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ.

- Advertisement -

ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್’ನಲ್ಲಿ ಆಸಕ್ತಿದಾಯಕ ಫೋಟೋ-ವೀಡಿಯೋಗಳನ್ನು ಶೇರ್ ಮಾಡುವ ಮೂಲಕ ನೆಟ್ಟಿಗರ ಮನಗೆದ್ದಿರುವ ಐಎಫ್ಎಸ್​ ಅಧಿಕಾರಿ ಪರ್ವೀಣ್​ ಕಸ್ವಾನ್​ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಈಗಾಗಲೇ 60 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದು, ಹಲವು ಮಂದಿ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಘಟನೆ ಎಲ್ಲಿ ನಡೆದಿದೆ ಎಂಬುದನ್ನು ಉಲ್ಲೇಖಿಸಿಲ್ಲ.

ವೀಡಿಯೋದ ಬಗ್ಗೆ ಕಾಮೆಂಟ್ ಮಾಡಿರುವ ಕಸ್ವಾನ್, ‘ಇದು ಕೆಲವರಿಗೆ ಅಸಾಮಾನ್ಯ ದೃಶ್ಯದಂತೆ ಕಾಣಿಸಬಹುದು. ಆದರೆ ಗುಡ್ಡಗಾಡು ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿರತೆಗಳು ಸಾಮಾನ್ಯವಾಗಿ ನಾಯಿಗಳನ್ನು ಬೇಟೆಯಾಡುತ್ತವೆ. ಹೀಗಾಗಿ ಸ್ಥಳೀಯರು ತಮ್ಮ ಸಾಕುಪ್ರಾಣಿಗಳ ಮೇಲೆ ಕಬ್ಬಿಣದ ಕಾಲರ್’ಅನ್ನು ಅಳವಡಿಸಿಕೊಂಡಿರುತ್ತಾರೆ.  ಇದು ಸಾಕುಪ್ರಾಣಿಗಳ ಜೀವ ಉಳಿಸುತ್ತದೆ’ ಎಂದಿದ್ದಾರೆ.

- Advertisement -

ಮನೆಗೆ ಎತ್ತರದ ಗೇಟನ್ನು ಅಳವಡಿಸಿದ್ದರೂ ಸಹ ಚಿರತೆಯು ಅದನ್ನೂ ಏರಿ ಬಂದು ಸಾಕು ನಾಯಿಯನ್ನು ಎಳೆದೊಯ್ದಿದೆ. ವೀಡಿಯೋದಲ್ಲಿ ಮೊದಲು ನಾಯಿಯು ಮನೆಯ ಗೇಟಿನ ಬಳಿ ಬಂದು ಕೂಗುತ್ತಿರುವುದನ್ನು ಕಾಣಬಹುದು. ನಂತರ ತಕ್ಷಣ ನಾಯಿ ದೂರ ಓಡಿಹೋಗುತ್ತದೆ. ಆದರೆ ಗೇಟಿನ ಮೇಲೆ ಹತ್ತಿ ಜಿಗಿದ ಚಿರತೆ ನಾಯಿಯನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೆ ಕಾಂಪೌಡ್​’ನ್ನು ಹಾರಿ ಓಡಿ ಹೋಗುವುದು  ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Join Whatsapp