ಜಿನೇವಾ : ಔಷಧಿ ತಯಾರಿಕಾ ಸಂಸ್ಥೆ ಫೈಝರ್ ಮತ್ತು ಬಯೋಎನ್ ಟೆಕ್ ನ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ಒ) ಅನುಮತಿ ನೀಡಿದೆ. ತ್ವರಿತವಾಗಿ ಬೇರೆ ಬೇರೆ ದೇಶಗಳಲ್ಲಿ ವಿತರಣೆ ಮಾಡಲು ಅನುಕೂಲವಾಗುವಂತೆ ತುರ್ತು ಬಳಕೆಗೆ ಈ ಅನುಮತಿ ನೀಡಲಾಗಿದೆ.
ಕೊರೊನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಡಬ್ಲ್ಯೂಎಚ್ ಒನಿಂದ ತುರ್ತು ಬಳಕೆಗೆ ಅನುಮತಿ ಪಡೆದ ಮೊದಲ ಲಸಿಕೆ ಇದಾಗಿದೆ.
ಇಂಗ್ಲೆಂಡ್, ಅಮೆರಿಕ, ಕೆನಡಾ ಸೇರಿದಂತೆ ಯುರೋಪ್ ದೇಶಗಳಲ್ಲಿ ಡಿ.8ರಿಂದಲೇ ಈ ಲಸಿಕೆ ಬಳಕೆಗೆ ಚಾಲನೆ ನೀಡಲಾಗಿದೆ.
ಡಬ್ಲ್ಯೂಎಚ್ ಒದ ತುರ್ತು ಬಳಕೆಯ ಪಟ್ಟಿಯು ವಿವಿಧ ದೇಶಗಳ ಔಷಧ ನಿಯಂತ್ರಕರಿಗೆ ಲಸಿಕೆ ಆಮದು ಮತ್ತು ವಿತರಣೆಗೆ ಅನುಮೋದನೆ ನೀಡಲು ಅನುಕೂಲವಾಗಿದೆ.