ಫೈಝರ್, ಕೋವಿಶೀಲ್ಡ್ ಲಸಿಕೆಯಿಂದ ಉತ್ಪಾದನೆಯಾದ ಪ್ರತಿಕಾಯಗಳ ಬಲ ಕೇವಲ 2-3 ತಿಂಗಳಲ್ಲಿ ನಾಶವಾಗಲಿದೆ : ಅಧ್ಯಯನ ವರದಿ

Prasthutha|

ಲಂಡನ್ನಿನ ಲ್ಯಾನ್ಸೆಟ್ ಜರ್ನಲ್ ನಲ್ಲಿ ಬಂದ ವೈದ್ಯಕೀಯ ವರದಿಯಂತೆ ಫೈಝರ್ ಮತ್ತು ಆಸ್ಟ್ರಾಜೆನೆಕಾ (ಭಾರತದಲ್ಲಿ ಕೋವಿಶೀಲ್ಡ್) ಮೊದಲಾದ ಲಸಿಕೆ ನೀಡುವಿಕೆಯಿಂದ ಪಡೆಯುವ ಪ್ರತಿಕಾಯ ಬಲವು (Anti Body) ಆರು ವಾರದಿಂದ ಮೂರು ತಿಂಗಳೊಳಗೆ ಬಲಗುಂದುತ್ತದೆ ಇಲ್ಲವೇ ಇಲ್ಲದಾಗುತ್ತದೆ ಎಂದು ಹೇಳಿದೆ.

- Advertisement -

ಲಂಡನ್ನಿನ ವಿಶ್ವವಿದ್ಯಾನಿಲಯ ಕಾಲೇಜಿನ ಸಂಶೋಧಕರ ಪ್ರಕಾರ ಈ ಮಟ್ಟದಲ್ಲಿ ಲಸಿಕೆಯ ಪ್ರತಿಕಾಯ ಸೃಷ್ಟಿ ಬಲವು ಲೋಪವಾಗುವುದಾದರೆ ಲಸಿಕೆ ನೀಡುವುದರ ಲಾಭದ ಬಗೆಗೆ ಇನ್ನಷ್ಟು ಸಂದೇಹ ಉಂಟಾಗುತ್ತದೆ ಹಾಗೂ ರೂಪಾಂತರಿ ಕೊರೋನಾ ಸುಲಭದಲ್ಲಿ ಲಸಿಕೆ ಪಡೆದವರಿಗೂ ಬರುತ್ತದೆ. ಆದರೆ ಎಷ್ಟು ಬೇಗ ಮರು ಕೊರೋನಾ ಬರುತ್ತದೆ ಎಂಬುದನ್ನು ಇನ್ನಷ್ಟೆ ಸಂಶೋಧಿಸಿ ತಿಳಿದುಕೊಳ್ಳಬೇಕಾಗಿದೆ. ಯುಸಿಎಲ್- ಲಂಡನ್ ವಿಶ್ವವಿದ್ಯಾನಿಲಯ ಕಾಲೇಜು ಪ್ರಕಾರ ಎರಡು ಡೋಸ್ ಫೈಝರ್ ಲಸಿಕೆಯು ಎರಡು ಡೋಸ್ ಆಸ್ಟ್ರಾಜೆನೆಕಾ (ಭಾರತದಲ್ಲಿ ಕೋವಿಶೀಲ್ಡ್) ಲಸಿಕೆಗಿಂತ ಹೆಚ್ಚು ಪ್ರತಿಕಾಯ ಉತ್ಪಾದಿಸುವುದು ಕಂಡು ಬಂದಿದೆ. ಅಲ್ಲದೆ ಹಿಂದಿನ ಸಾರ್ಸ್ ಕೋವಿ-2 ವೈರಸ್ ಗಿಂತ ಈಗಿನ ಲಸಿಕೆ ತೆಗೆದುಕೊಂಡವರಲ್ಲಿ ಹೆಚ್ಚು ಪ್ರತಿಕಾಯಗಳು ಉಂಟಾಗಿರುವುದು ಕಂಡು ಬಂದಿರುವುದಾಗಿಯೂ ಯುಸಿಎಲ್ ಹೇಳಿದೆ.

ಆದರೆ ಎರಡ್ಮೂರು ತಿಂಗಳಲ್ಲಿ ಪ್ರತಿಕಾಯ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ಶ್ರೀಮತಿ ಮಧುಮಿತ ಸ್ರೋಟ್ರಿ ಹೇಳುತ್ತಾರೆ. 18 ವರ್ಷ ದಾಟಿದ 600 ಜನರ ಮೇಲೆ ಅಧ್ಯಯನ ನಡೆಸಿ ಈ ಫಲಿತಾಂಶ ಪಡೆಯಲಾಗಿದೆ. ಫೈಝರ್ ಕೋವಿಡ್ ಮೇಲೆ ಹೆಚ್ಚು ರಕ್ಷಕ ಎಂದರೂ ಅದು ಹೆಚ್ಚು ಕಾಲ ರಕ್ಷಣೆ ನೀಡುವುದಿಲ್ಲ. ಪ್ರತಿಕಾಯ ಬೀಳುಗೆ ಯಾವ ಪ್ರಮಾಣದ್ದು ಎಂದು ಈಗಲೇ ಹೇಳಲಾಗದು. ಅಲ್ಲದೆ ಸದ್ಯ ಕೊರೋನಾದಿಂದ ರಕ್ಷಣೆಗೆ ಲಸಿಕೆ ಬೇಕಾಗುತ್ತದೆ.

- Advertisement -

ಫೈಝರ್ ಬಲ ಮಿಲಿಲೀಟರ್‌ಗೆ 7,506 ಯೂನಿಟ್‌ನಿಂದ 3,320 ಯೂನಿಟ್‌ಗೆ 45ರಿಂದ 70 ದಿನಗಳಲ್ಲಿ ಕಡಿಮೆಯಾದುದು ಕಂಡುಬಂದಿದೆ. ಭಾರತದ ಕೋವಿಶೀಲ್ಡ್ ಬಲ 20 ದಿನಗಳಲ್ಲಿ ಮಿಲಿ ಲೀಟರಿಗೆ 1,201ಕ್ಕೆ ತಗ್ಗಿ 70 ದಿನದ ಹೊತ್ತಿಗೆ ಇನ್ನೂ ಐದು ಪಟ್ಟು ಬಲಹೀನ ಆಗಿರುತ್ತದೆ. ಪ್ರೊ. ರಾಬ್ ಆಲ್‌ಡ್ರಿಡ್ಜ್ ಪ್ರಕಾರ ಆಸ್ಟ್ರಾಜೆನೆಕಾ ಅತಿ ಕಡಿಮೆ ಪ್ರತಿಕಾಯ ಉತ್ಪಾದಿಸುವುದಾಗಿದೆ. ಸಣ್ಣ ಗುಂಪಿನ ಮೇಲೆ ಅಧ್ಯಯನ ನಡೆದಿರುವುರಿಂದ ಇದು ಪರಿಪೂರ್ಣ ಮಾಹಿತಿ ಎಂದು ಹೇಳಲಾಗದಿದ್ದರೂ, ಲಸಿಕೆಗಳ ಪ್ರತಿಕಾಯ ಬಲ ನಿರಂತರವಾದುದಲ್ಲ ಎಂಬುದು ಮಾತ್ರ ಸತ್ಯ.

ಒಬ್ಬೊಬ್ಬರಿಂದ ಒಂದು ಸ್ಯಾಂಪಲ್ ಮಾತ್ರ ಪಡೆದಿದ್ದುದರಿಂದ ಅವರ ಪ್ರತಿಕಾಯ ಪ್ರಮಾಣ ಮುಂದೆ ಅವರಲ್ಲಿ ಯಾವ ತಿರುವು ಕಂಡಿತು ಎಂಬುದನ್ನು ಮುಂದಿನ ಅಧ್ಯಯನಗಳಷ್ಟೆ ತಿಳಿಸಬೇಕಾಗಿದೆ. ಇನ್ನು ವಿಭಿನ್ನ ವ್ಯಕ್ತಿಗಳು ವಿಭಿನ್ನ ಪ್ರತಿಕಾಯ ಬಲವನ್ನು ವೈರಸ್‌ಗೆ ಅವರ ದೇಹದ ಟಿ ಕೋಶ ಪ್ರತಿರೋಧದ ಮೇಲೆ ಹೊಂದಿರುತ್ತಾರೆ. ಅಲ್ಲದೆ ಪ್ರತಿಕಾಯ ಸಂಖ್ಯೆ ಕಡಿಮೆ ಆದರೂ ರೋಗ ನಿರೋಧಕ ಶಕ್ತಿ ಎಚ್ಚರ ಇರುತ್ತದಾದ್ದರಿಂದ ರೋಗ ಭಯ ಬರೇ ಆಗಿನ ಪ್ರತಿಕಾಯ ಸಂಖ್ಯೆಯನ್ನಷ್ಟೆ ಅವಲಂಬಿಸಿರುವುದಿಲ್ಲ.

Join Whatsapp