ಈಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆ ಮುಟ್ಟುಗೋಲು: #PFIJhukegaNahi ಎಂದ ಟ್ವಿಟಿಗರು !

Prasthutha|

►►ಭಾರತದ ನಂ.1 ಟ್ರೆಂಡ್ ಆಗಿ ಗಮನಸೆಳೆದ ಅಭಿಯಾನ !

- Advertisement -

ನವದೆಹಲಿ: ಜಾರಿ ನಿರ್ದೇಶನಲಾಯ ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈಡಿ ವಿರುದ್ಧ ಕೆಂಡಕಾರಿರುವ ನೆಟ್ಟಿಗರು #PFIJhukegaNahi ಹ್ಯಾಷ್’ಟ್ಯಾಗನ್ನು ಭಾರತದಲ್ಲಿ ನಂ1 ಟ್ರೆಂಡ್ ಮಾಡಿದ್ದಾರೆ. 70 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳನ್ನು #PFIJhukegaNahi(ಪಿಎಫ್ಐ ತಲೆ ಬಾಗಲ್ಲ) ಎಂದು ಹ್ಯಾಷ್ಟ್ಯಾಗ್ ಮೂಲಕ ಟ್ವೀಟ್ ಮಾಡಲಾಗಿದೆ.

ಇತರರು ಇಡಿ, ಎನ್ ಐಎ ಇತ್ಯಾದಿಗಳಿಂದ ಭಯಭೀತರಾದರೆ, ಪಾಪ್ಯುಲರ್ ಫ್ರಂಟ್ ನ ಹೋರಾಟದ ಸಂಕಲ್ಪವು ಇನ್ನಷ್ಟು ಬಲಗೊಳ್ಳುತ್ತದೆ. ನಮ್ಮ DNA ದಯಾಮರಣ ಅರ್ಜಿಗಳಂತಲ್ಲ, ನಮ್ಮ DNA ನಿರಂಕುಶಾಧಿಕಾರಿಗಳ ಕಣ್ಣಲ್ಲಿ ಕಣ್ಣಿಟ್ಟಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

- Advertisement -

ಪಿಎಫ್ಐ ವಿರುದ್ಧ ಈಡಿಯ ಕ್ರಮವು RSSನ ಆಣತಿಯಂತೆ ಇದೆ. ಪ್ರತಿಪಕ್ಷಗಳ ಧ್ವನಿಗಳನ್ನು ಗುರಿಯಾಗಿಸಲು ಬಿಜೆಪಿ ಇಡಿ ಮತ್ತು ಇತರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಭಯದ ತಂತ್ರವು ಇತರರೊಂದಿಗೆ ಕೆಲಸ ಮಾಡಬಹುದೇ ವಿನಹ ಪಿಎಫ್ಐನಲ್ಲಿ ಕೆಲಸ ಮಾಡುವುದಿಲ್ಲ.RSS ಫ್ಯಾಸಿಸಂ ವಿರುದ್ಧದ ನಮ್ಮ ಹೋರಾಟವು ಅದೇ ಮನೋಭಾವದಿಂದ ಮುಂದುವರಿಯುತ್ತದೆ ಎಂದೂ ಟ್ವೀಟ್ ಮಾಡಲಾಗಿದೆ.

ಎಡಪಂಥೀಯ ಸಿದ್ದಾಂತಕ್ಕೆ ಸೆಡ್ಡು ಹೊಡೆಯಲು ಸರಕಾರ ಈಡಿಯನ್ನು ದುರ್ಬಳಕೆ ಮಾಡಿಕೊಂಡು ತನ್ನ ವಿರೋಧಿಗಳ ಸದ್ದಡಗಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಾ ಬಂದಿರುವುದನ್ನು ನೆಟ್ಟಿಗರು ಬಲವಾಗಿ ಟೀಕಿಸಿದ್ದಾರೆ.

Join Whatsapp