ಕೊಡಗು: ಪಾಪ್ಯುಲರ್ ಫ್ರಂಟ್ ನಿಂದ ನೆರೆ ಸಂತ್ರಸ್ತ ಕುಟುಂಬಕ್ಕೆ ಮನೆ ಹಸ್ತಾಂತರ

Prasthutha News

ಕೊಡಗು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನೆರೆ ಸಂತ್ರಸ್ತ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮವು ಸೆ.16ರಂದು ಕುಶಾಲ ನಗರದಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಸಂತ್ರಸ್ತ ಕುಟುಂಬಕ್ಕೆ ಮನೆಯ ಕೀಲಿಕೈ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಖಾದರ್ ಪುತ್ತೂರು, ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮುಹ್ಸಿನ್, ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕರ್, ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಸಮಿತಿ ಸದಸ್ಯ ಇಕ್ಬಾಲ್ ಬಂಗೇರ್ ಕಟ್ಟೆ, ನೂರ್ ಮಸ್ಜಿದ್ ಅಧ್ಯಕ್ಷ ನಿಝಮುದ್ದೀನ್,  ಜಾಮಿಯಾ ಮಸ್ಜಿದ್ ಕಮಿಟಿ ಸದಸ್ಯ ಮುಹಮ್ಮದ್ ರಫೀಕ್, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹನೀಫ್, ಜನತಾ ಕಾಲನಿ ಮಸ್ಜಿದ್ ಇಮಾಮ್ ಮೌಲಾನಾ ಅಬ್ದುಲ್ ರಹ್ಮಾನ್, ಹಿಲಾಲ್ ಮಸ್ಜಿದ್ ಕಮಿಟಿಯ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

ಈ ಕುಟುಂಬವು 2018ರಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ಮನೆಮಾರನ್ನು ಕಳೆದುಕೊಂಡು ನಿರಾಶ್ರಿತವಾಗಿತ್ತು. ಸೂಕ್ತ ದಾಖಲೆಗಳಿಲ್ಲದ ಕಾರಣ ಈ ಕುಟುಂಬವು ಸರಕಾರದಿಂದ ದೊರಕಬೇಕಾಗಿದ್ದ ನೆರೆ ಪರಿಹಾರದಿಂದಲೂ ವಂಚಿತವಾಗಿತ್ತು. ಸಂತ್ರಸ್ತ ಕುಟುಂಬದ ಸಂಕಷ್ಟವನ್ನು ಮನಗಂಡ ಪಾಪ್ಯುಲರ್ ಫ್ರಂಟ್, ಮನೆ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿತ್ತು.

ಈ ಹಿಂದೆ ಮಡಿಕೇರಿಯಲ್ಲಿ ನೆರೆ ಸಂತ್ರಸ್ತ ಕುಟುಂಬವೊಂದು ಇದೇ ರೀತಿ ನಿರ್ಲಕ್ಷ್ಯಕ್ಕೊಳಗಾದ ವೇಳೆಯಲ್ಲೂ ಪಾಪ್ಯುಲರ್ ಫ್ರಂಟ್ ಆ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯ ನೆರವು ನೀಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.


Prasthutha News

Leave a Reply

Your email address will not be published. Required fields are marked *