ಪಾಪ್ಯುಲರ್ ಫ್ರಂಟ್ ನ ಕೊರೋನಾ ವಾರಿಯರ್ಸ್ ಗೆ ರಾಜ್ಯದ ಹಲವೆಡೆ ಸನ್ಮಾನ

Prasthutha|

►►ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರಗಳಲ್ಲಿ ಸನ್ಮಾನ ಸ್ವೀಕರಿಸಿದ ಕಾರ್ಯಕರ್ತರು

ಬೆಂಗಳೂರು: ಕೋವಿಡ್ 19 ಸಾಂಕ್ರಮಿಕ ಹಾಗೂ ಲಾಕ್ಡೌನ್ ಕಾಲಘಟ್ಟದಲ್ಲಿ ಕೈಗೊಂಡ ಪರಿಹಾರ ಕಾರ್ಯಾಚರಣೆ ಮತ್ತು ಮೃತದೇಹಗಳ ಗೌರವಯುತ ಧಫನ ಕಾರ್ಯಕ್ಕಾಗಿ ರಾಜ್ಯದ ಹಲವೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಸನ್ಮಾನಿಸಲಾಗಿದೆ.

- Advertisement -

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆಯ ವತಿಯಿಂದ ಇತ್ತೀಚೆಗೆ ಕೋವಿಡ್ 19 ಜಾಗೃತಿ ದಸರಾ ಮಹೋತ್ಸವ – 2020 ಪ್ರಯುಕ್ತ ನಡೆದ ಜನಜಾಗೃತಿ ಸಭೆಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭದ್ರಾವತಿ ತಾಲೂಕು ಅಧ್ಯಕ್ಷ ಮುಹಮ್ಮದ್ ಸಾದಿಕುಲ್ಲಾ ರಿಗೆ ಶಾಲು ಹೊದಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಅದೇವೆಳೆ, ಚಿಕ್ಕಮಗಳೂರಿನಲ್ಲಿ ಕೋವಿಡ್ 19 ನಲ್ಲಿ ಮೃತಪಟ್ಟ 35ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆ ನಡೆಸಿದ ಮತ್ತು ಲಾಕ್ಡೌನ್ ನಲ್ಲಿ ಬಡವರಿಗೆ ಅಗತ್ಯ ದಿನಸಿ ಕಿಟ್ ವಿತರಣೆ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು  ಪ್ರತಿಷ್ಠಿತ ಜಾಮಿಯಾ ಕನ್ಸೂಲ್ ಈಮಾನ್ ವತಿಯಿಂದ ನಡೆದ ಈದ್ ಮಿಲಾದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಚಾಮರಾಜ ನಗರದಲ್ಲಿ ಬಿಎಸ್ಪಿ ಪಕ್ಷದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ವೇಳೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಕೋವಿಡ್ 19 ಪರಿಹಾರ ಕಾರ್ಯಾಚರಣೆಗಾಗಿ ಅಭಿನಂದಿಸಲಾಗಿದೆ.

- Advertisement -