ಹರ್ಷ ಮಂದರ್ ನಿವಾಸದ ಮೇಲೆ ಈಡಿ, ಐಟಿ ದಾಳಿಗೆ ಪಾಪ್ಯುಲರ್ ಫ್ರಂಟ್ ಖಂಡನೆ

Prasthutha|

ನವದೆಹಲಿ: ಖ್ಯಾತ ಸಾಮಾಜಿಕ‌ ಹೋರಾಟಗಾರ ಹರ್ಷ ಮಂದರ್ ಕಚೇರಿ‌ ಹಾಗೂ ನಿವಾಸಗಳ‌ ಮೇಲೆ‌ ಜಾರಿ ನಿರ್ದೇಶನಾಲಯ (ಈಡಿ) ನಡೆಸಿರುವ ದಾಳಿ ಮತ್ತು ಉಮೀದ್ ಅಮಾನ್ ಘರ್ ಮೆಹ್ರೌಲಿಯಲ್ಲಿ ನಡೆಸಿತ್ತಿರುವ ಬಾಲಾಶ್ರಮಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್ಮ್ಯಾನ್ ಒ.ಎಂ.ಎ ಸಲಾಂ ಖಂಡಿಸಿದ್ದಾರೆ.

- Advertisement -


ಈ ದಾಳಿಗಳು ಸ್ಪಷ್ಟವಾಗಿ ಮೋದಿ ಸರಕಾರದ ಟೀಕಾಕಾರರ ವಿರುದ್ಧ ಕೇಂದ್ರದ ಏಜ‌ನ್ಸಿಗಳ ನೇತೃತ್ವದಲ್ಲಿ ನಡೆಯುವ ನಾಚಿಕೆಗೇಡಿನಿಂದ ಕೂಡಿದ ಕಿರುಕುಳ ಮತ್ತು ಭಯಪಡಿಸುವಿಕೆಯ ಭಾಗವಾಗಿದೆ ಎಂದು ಸಲಾಂ ತಿಳಿಸಿದ್ದಾರೆ.


ಶ್ರೀಯುತ ಹರ್ಷವರ್ಧನರ ಜೀವನ ಮತ್ತು ಕೆಲಸ ತೆರೆದ ಪುಸ್ತಕವಾಗಿದೆ. ಅವರು ಸಂಘಪರಿವಾರದ ದ್ವೇಷ ರಾಜಕೀಯದ ತೀವ್ರ ವಿಮರ್ಶಕರಾಗಿದ್ದರು ಮತ್ತು ಶಾಂತಿ, ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ನ್ಯಾಯದ ಕ್ರಿಯಾಶೀಲ ಪ್ರಚಾರಕನಾಗಿದ್ದರು. ಆಡಳಿತ ಪಕ್ಷವನ್ನು ವಿರೋಧಿಸುವ ಅಭಿಪ್ರಾಯವನ್ನು ಹೊಂದಿರುವುದಕ್ಕಾಗಿ ಹಾಗೂ ಅದನ್ನು ಮುಕ್ತವಾಗಿ‌ ವ್ಯಕ್ತಪಡಿಸಿದ್ದಕ್ಕಾಗಿ ದೇಶದಲ್ಲಿ ಇತರ ಮಾನವ ಹಕ್ಕುಗಳ ಹೋರಾಟಗಾರರು, ಬುದ್ಧಿಜೀವಿಗಳು, ಸಂಘಟನೆಗಳು ಮತ್ತು ಎನ್.ಜಿ.ಒಗಳ ಮೇಲೆ ನಡೆದಂತೆಯೇ
ಹರ್ಷ ಮಂದರ್ ಮತ್ತು ಅವರ ‘ಸೆಂಟರ್ ಫೋರ್ ಈಕ್ವಿಟಿ ಸ್ಟಡೀಸ್’ ದಾಳಿಗೊಳಗಾಗಿದೆ.

- Advertisement -


ಕಳೆದ ಹಲವು ವರ್ಷಗಳಿಂದ ಕೃತಕ ತನಿಖೆ, ಸುಳ್ಳು ಪ್ರಕರಣಗಳು ಮತ್ತು ಕರಾಳ ಕಾನೂನುಗಳ ಮೂಲಕ ಮೋದಿ ತನ್ನ ರಾಜಕೀಯ ವಿರೋಧಿಗಳನ್ನು ಗುರಿ ಪಡಿಸುತ್ತಿರವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ರಜಾಸತ್ತಾತ್ಮಕ ಹಕ್ಕುಗಳ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ದಮನಿಸುವಿದಕ್ಕಾಗಿ ಅಧಿಕಾರ ದುರುಪಯೋಗಪಡಿಸುವುದನ್ನು ಪ್ರತಿರೋಧಿಸಲು ಪ್ರಜಾಸತ್ತಾತ್ಮಕ ಪಡೆಗಳು‌ ಮುಂದೆ ಬರಬೇಕಾಗಿದೆ. ಈ ಕಿರುಕುಳದ ವಿರುದ್ಧ ಹರ್ಷಮಂದರ್ ಮತ್ತು ಸಿ.ಈ.ಎಸ್ ಜೊತೆ ಪಾಪ್ಯುಲರ್ ಫ್ರಂಟ್ ಐಕಮತ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಒಎಂಎ ಸಲಾಂ ಹೇಳಿದ್ದಾರೆ.

Join Whatsapp