ವಿಧಾನಸಭಾ ಚುನಾವಣೆಗಳ ಫಲಿತಾಂಶವು ಬಿಜೆಪಿಯ ದುರಾಡಳಿತ ಮತ್ತು ದ್ವೇಷ ರಾಜಕೀಯದ ವಿರುದ್ಧ ಜನರು ನೀಡಿದ ಪ್ರತಿಕ್ರಿಯೆ : ಪಾಪ್ಯುಲರ್ ಫ್ರಂಟ್

Prasthutha|

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಜನತೆಯ ದಿಟ್ಟ ಉತ್ತರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

- Advertisement -

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಭಾರತದ ಜಾತ್ಯತೀತ ರಾಜಕೀಯಕ್ಕೆ ಒಂದು ದೊಡ್ಡ ಆಶಾಕಿರಣವಾಗಿದೆ. ಈ ಮೂರು ರಾಜ್ಯಗಳಲ್ಲೂ ಬಿಜೆಪಿ ಕೆಲವು ಸೀಟುಗಳನ್ನು ಗೆಲ್ಲುವ ಹತಾಶ ಪ್ರಯತ್ನದಲ್ಲಿ ಬಹಳಷ್ಟು ಎಡವಿದ್ದು, ಇದು ಅದರ ನೈತಿಕ ಅಧಃಪತನವನ್ನು ಜಗಜ್ಜಾಹೀರುಗೊಳಿಸಿದೆ. ಅದರ ರ‍್ಯಾಲಿಗಳಲ್ಲಿ ಕಂಡುಬಂದ ಪ್ರಚೋದನಾಕಾರಿ ಭಾಷಣಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ಮತ್ತು ದಾಳಿಯ ಬೆದರಿಕೆಗಳು ದೇಶದ ರಾಜಕೀಯ ವಾತಾವರಣವನ್ನು ಕೆಡಿಸಿಬಿಟ್ಟಿತ್ತು. ಈಡಿಯಂತಹ ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆ, ಬಿಜೆಪಿಗೆ ಲಾಭ ಉಂಟು ಮಾಡಲು ಹಲವು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗದ ದುರುಪಯೋಗ, ಪಾವತಿ ಮಾಧ್ಯಮಗಳಿಂದ ಸುಳ್ಳು ಪ್ರಚಾರ ಮತ್ತು ವಿರೋಧ ಪಕ್ಷಗಳ ಶಾಸಕರ ಖರೀದಿ ಎಲ್ಲವೂ ಯಾವುದೇ ಕೆಲಸಕ್ಕೆ ಬರಲಿಲ್ಲ. ಅಂತಿಮವಾಗಿ ಪಕ್ಷಕ್ಕೆ ನಿರಾಶಾದಾಯಕ ಫಲಿತಾಂಶಗಳನ್ನು ಎದುರಿಸಬೇಕಾಗಿ ಬಂತು. ಬಿಜೆಪಿಯ ಎಲ್ಲಾ  ಭ್ರಾಮಕ ವಿಧಾನಗಳ ಹೊರತಾಗಿಯೂ ಜನತೆ ಧಾರ್ಮಿಕ ಮತಾಂಧತೆಗೆ ಎದುರಾಗಿ ಜಾತ್ಯತೀತ ಕಲ್ಯಾಣ ರಾಜಕೀಯವನ್ನು ಆಯ್ಕೆ ಮಾಡಿಕೊಂಡರು ಮತ್ತು ಬಿಜೆಪಿಗೆ ಅದರ ಸ್ಥಾನವನ್ನು ಮನವರಿಕೆ ಮಾಡಿಕೊಟ್ಟರು. ಬಿಜೆಪಿ ಕೇರಳದಲ್ಲಿ 1 ಸೀಟಿನಿಂದ ಶೂನ್ಯಕ್ಕೆ ಜಾರಿದೆ. ಅದೇ ವೇಳೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಪಕ್ಷವು ತನ್ನ ಪ್ರತಿಪಾದನೆಗಳ ಹತ್ತಿರವೂ ತಲುಪಿಲ್ಲ.

ಈ ಫಲಿತಾಂಶಗಳು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಕಳೆದ 7 ವರ್ಷಗಳ ದುರಾಡಳಿತದ ವಿರುದ್ಧ ಜನರ ಬಹಿರಂಗ ಪ್ರತಿಕ್ರಿಯೆಯಾಗಿದೆ. ಮೋದಿ ಸರಕಾರದ ಬಳಿ ಜೀವನದ ಯಾವುದೇ ಕ್ಷೇತ್ರಗಳಲ್ಲೂ ಅಭಿವೃದ್ಧಿ ಅಥವಾ ಪ್ರಗತಿಯ ಹೆಸರಿನಲ್ಲಿ ಜನತೆಯ ಮುಂದೆ ಪ್ರಸ್ತುತಪಡಿಸಲು ಏನೂ ಇಲ್ಲ. ಒಂದೆಡೆ ಸರಕಾರದ ತಪ್ಪು ನೀತಿಗಳು ದೇಶದ ಅರ್ಥವ್ಯವಸ್ಥೆಯನ್ನು ದಿವಾಳಿಯಂಚಿಗೆ ಕೊಂಡೊಯ್ಯುತ್ತಿದೆ. ಮತ್ತೊಂದೆಡೆ, ಸಾಂಕ್ರಾಮಿಕದ ಸನ್ನಿವೇಶದ ವೇಳೆಯ ಮರೆಯಲಾಗದ ದುರಾಡಳಿತವು ಸರಕಾರ ನಿರ್ಮಿತ ಮತ್ತೊಂದು ದುರಂತವಾಗಿಬಿಟ್ಟಿದೆ. ದಿನಂಪ್ರತಿ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಚುನಾವಣಾ ಅಭಿಯಾನದ ಹೊರತಾಗಿ ಒಂದು ಉತ್ತರದಾಯಿ ಸರಕಾರದ ಉಪಸ್ಥಿತಿ ಎಲ್ಲೂ ಕಂಡು ಬರುತ್ತಿಲ್ಲ. ಈ ಫಲಿತಾಂಶವು ಜನರು ನೀಡಿದ ತೀಕ್ಷ್ಣವಾದ ಉತ್ತರವಾಗಿದೆ.

- Advertisement -

ಈ ರಾಜ್ಯಗಳಲ್ಲಿ ದೊಡ್ಡಮಟ್ಟದ ಗೆಲುವು ಸಾಧಿಸಿದ ಎಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಬಿಜೆಪಿಯನ್ನು ಹೊರಗಟ್ಟಲು ಹಾದಿ ತೋರಿದ ಜನತೆಯನ್ನು ಪಾಪ್ಯುಲರ್ ಫ್ರಂಟ್ ಅಭಿನಂದಿಸಿದೆ.

Join Whatsapp