PFI ಭಾರತೀಯ ಸಂವಿಧಾನವನ್ನು ರಕ್ಷಿಸುತ್ತಿದೆ : ಅಜ್ಮೀರ್ ಶರೀಫ್ ದರ್ಗಾ ಮುಖ್ಯಸ್ಥ ಸಯ್ಯದ್ ಸರ್ವಾರ್ ಚಿಶ್ತಿ

Prasthutha|

ನವದೆಹಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಜ್ಮೀರ್ ಶರೀಫ್ ದರ್ಗಾದ ಮುಖ್ಯಸ್ಥ ಸಯ್ಯದ್ ಸರ್ವಾರ್ ಚಿಶ್ತಿ, ಪಿಎಫ್ ಐ ಬೆಂಬಲಿಸಲು ತಮಗಿರುವ ಕಾರಣಗಳನ್ನು ತಿಳಿಸಿದ್ದಾರೆ. ಮುಸ್ಲಿಮರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿರುವ ಪಿಎಫ್ ಐ, ಭಾರತೀಯ ಸಂವಿಧಾನವನ್ನು ರಕ್ಷಿಸುತ್ತಿರುವುದರಿಂದ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಸಯ್ಯದ್ ಸರ್ವಾರ್ ಚಿಶ್ತಿ ಹೇಳಿದ್ದಾರೆ.
“ಅದು ಕಾರ್ಯಕರ್ತ ಆಧಾರಿತ ಮುಸ್ಲಿಂ ಸಂಘಟನೆ. ಅವರು ಸಿಎಎ, ಎನ್ ಆರ್ ಸಿ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು ಅದರಿಂದಾಗಿ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಅವರ ಕಾರ್ಯಕರ್ತರು ಕಿರುಕುಳಗಳನ್ನು ಎದುರಿಸಿದ್ದಾರೆ. ಅವರ ವಿರುದ್ಧದ ಯಾವುದೇ ಪ್ರಕರಣಗಳು ಸಾಬೀತಾಗಿಲ್ಲ. ನಾವು ಪಿಎಫ್ ಐ ಅನ್ನು ಬೆಂಬಲಿಸುತ್ತೇವೆ, ಯಾಕೆಂದರೆ, ಅವರು ಭಾರತೀಯ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ಪಿಎಫ್ ಐಯನ್ನು ವಿರೋಧಿಸುವವರು ಯಾವತ್ತೂ ಬಿಜೆಪಿ, ಆರೆಸ್ಸೆಸ್, ವಿಎಚ್ ಪಿ ಬಗ್ಗೆ ಮಾತನಾಡಿಲ್ಲ. ಬದಲಿಗೆ ಅವುಗಳ ಬಗ್ಗೆ ಪ್ರಶಂಸಿಸುತ್ತಾರೆ ಎಂದು ಅವರು ಹೇಳಿದ್ದಾರೆ.



Join Whatsapp