ಅಚ್ಛೇ ದಿನ್‌ | ಕರ್ನಾಟಕದಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿತು!

Prasthutha|

ಬಳ್ಳಾರಿ : ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 100 ರೂ. ಗಡಿ ದಾಟಿ ದಿನಗಳೇ ಆಗಿವೆ. ಇದೀಗ ಕರ್ನಾಟಕದಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ. ಬಳ್ಳಾರಿಯಲ್ಲಿ ಭಾನುವಾರ ಪೆಟ್ರೋಲ್‌ ಬೆಲೆ ಲೀಟರ್‌ ಗೆ ಶತಕದ ಗಡಿ ದಾಟಿದೆ.

- Advertisement -

ಬಳ್ಳಾರಿಯಲ್ಲಿ ಇಂದು ಪೆಟ್ರೋಲ್‌ ಬೆಲೆ ಲೀಟರ್‌ 100.08 ಪೈಸೆಗೆ ಏರಿಕೆಯಾಗಿದೆ. ಇದನ್ನು ಹೊರತುಪಡಿಸಿ ರಾಜ್ಯದಲ್ಲಿ ವಿಜಯನಗರದಲ್ಲಿ 99.45 ರೂ. ಆಗಿದೆ. ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿರುವುದಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ರೂ. 100 ಗಡಿ ದಾಟಿ ಹಲವು ದಿನಗಳಾಗಿವೆ. ಪೆಟ್ರೋಲ್‌ ಬೆಲೆ ಗಗನಕ್ಕೇರುತ್ತಿದ್ದರೂ, ಸಾರ್ವಜನಿಕರ ಪರವಾಗಿ ಈ ಬಗ್ಗೆ ಯಾರೂ ಧ್ವನಿ ಎತ್ತದಿರುವುದು ವಿಪರ್ಯಾಸ.

Join Whatsapp