ಪರಿಹಾರ ಸಾಮಾಗ್ರಿ ಕಳ್ಳತನದ ಆರೋಪ | ಪ.ಬಂ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕೇಸ್‌

Prasthutha|

ಕೊಲ್ಕತಾ : ಲಕ್ಷಾಂತರ ರೂ. ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆಂದು ಪಶ್ಚಿಮ ಬಂಗಾಳದ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ವ ಮೇಧಿನಿಪುರ ಜಿಲ್ಲೆಯ ಕಾಂತಿ ನಗರ ಪಾಲಿಕೆಯ ಕಚೇರಿಯಲ್ಲಿಟ್ಟಿದ್ದ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆಂದು ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಲಿಕೆ ಸದಸ್ಯ ರತನ್‌ ದೀಪ್‌ ಮುನ್ನಾ ದೂರು ದಾಖಲಿಸಿದ್ದರು.

ಮೇ ೨೯ರಂದು ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ಅವರ ಸೂಚನೆಯಂತೆ ಮುನ್ಸಿಪಾಲಿಟಿ ಕಚೇರಿಯಿಂದ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯಲಾಗಿದೆ. ಬಲವಂತವಾಗಿ ಕಾನೂನಿಗೆ ವಿರುದ್ಧವಾಗಿ ಬೀಗ ತೆಗೆದು ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  

- Advertisement -

ಸುವೇಂದು ಅಧಿಕಾರಿ ಆಪ್ತ ರಾಖಲ್‌ ಬೆರಾ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದ ಆರೋಪದಲ್ಲಿ ರಾಖಲ್‌ ಬಂಧನವಾಗಿದೆ. ರಾಖಲ್‌ ಬಂಧನದ ದಿನವೇ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -