ಜನಾರ್ದನ ಪೂಜಾರಿ ವಿರುದ್ಧ ಪೋಸ್ಟ್ | ‘ಬಿರುವೆರ್ ಕುಡ್ಲ’ದಿಂದ ದೂರು

Prasthutha|

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ವಿರುದ್ಧ ಪೋಸ್ಟ್ ಮಾಡಿರುವ ಕರಾವಳಿ ರಶೀದ್ ಟಿಪ್ಪು ಎಂಬ ಹೆಸರಿನ ವ್ಯಕ್ತಿಯ ವಿರುದ್ಧ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

 “ಜನಾರ್ದನ ಪೂಜಾರಿಯವರು, ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ, ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವಿಚಿತ್ರ ವ್ಯಕ್ತಿ. ಈವರೆಗೆ ಈತನನ್ನು ಹೈಕಮಾಂಡ್ ಕೂಡ ವಿರೋಧಿಸಿಲ್ಲ. ಈ ರೀತಿ ಯಾರಾದರೂ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡಿದ್ದಲ್ಲಿ ಕ್ಷಣ ಮಾತ್ರದಲ್ಲಿ ಕಾಂಗ್ರೆಸ್ ವಜಾಗೊಳಿಸುತ್ತಿತ್ತು. ”ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಸಿದ್ಧಾಂತ ನಿಲ್ಲಿಸಿ” ಎಂದು ರಶೀದ್ ಟಿಪ್ಪು ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.

ಜೊತೆಗೆ, ಜನಾರ್ದನ ಪೂಜಾರಿಯವರ ಫೋಟೋ ಅಪ್ಲೋಡ್ ಮಾಡಿ ಅದರ ಮೇಲೆ ”ಎಣ್ಣೆಯಲ್ಲಿ ಕರಿದ ಗೋಲಿಬಜೆ, ಬೆಂಕಿಯಲ್ಲಿ ಕರಿದ ಗೋಲಿಬಜೆ” ಎಂದು ಬರೆದಿದ್ದು, ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.



Join Whatsapp