ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಚಿವ ಧರ್ಮೇಂದ್ರ ಪ್ರಧಾನ್ ಕೊಟ್ಟ 2 ಕಾರಣಗಳೇನು?

Prasthutha|

ಹೊಸದಿಲ್ಲಿ : ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಯು ಗರಿಷ್ಠ ಮಟ್ಟವನ್ನ ತಲುಪಿದೆ. ಈ ಬಗ್ಗೆ ಮಾತಾನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇಂದನಗಳ ಬೆಲೆ ಏರಿಕೆಗೆ ಎರಡು ಕಾರಣಗಳನ್ನ ಕೊಟ್ಟಿದ್ದಾರೆ.

- Advertisement -

ಒಂದು ಕಾರಣ ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಉತ್ಪಾದನೆ ಕಡಿಮೆಯಾಗಿರುವುದರಿಂದ ಉತ್ಪಾದಿಸುವ ದೇಶಗಳು ತಮ್ಮ ಲಾಭವನ್ನ ಹೆಚ್ಚಿಸಲು ತೈಲ ಉತ್ಪಾದನೆಯನ್ನ ಕಡಿಮೆ ಮಾಡುತ್ತಿವೆ. ಆದ್ದರಿಂದ, ಕಚ್ಚಾ ತೈಲವನ್ನ ಖರೀದಿಸುವ ದೇಶಗಳಿಗೆ ಇದು ದುಬಾರಿಯಾಗುತ್ತಿದೆ’ ಎಂದಿದ್ದಾರೆ.

ಸಚಿವರು ಕೊಟ್ಟ ಇನ್ನೊಂದು ಕಾರಣವೇನೆಂದರೆ, “ನಾವು ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹಿಸುತ್ತಿವೆ. ಸಂಗ್ರಹಿಸಿದ ತೆರಿಗೆಗಳನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚು ಮಾಡುವುದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸರ್ಕಾರ ತನ್ನ ಹೂಡಿಕೆಯನ್ನು ಹೆಚ್ಚಿಸಿ ಈ ಬಜೆಟ್‌ನಲ್ಲಿ ಶೇಕಡಾ 34 ರಷ್ಟು ಹೆಚ್ಚಿನ ಬಂಡವಾಳವನ್ನ ಖರ್ಚು ಮಾಡಲಿದೆ” ಎಂದರು.



Join Whatsapp