ಮಸೀದಿ, ಚರ್ಚ್, ಪ್ರಾರ್ಥನಾ ಮಂದರಿಗಳಲ್ಲಿ ಧ್ವನಿವರ್ಧಕಗಳ ಬಳಕೆ‌ಗೆ ಅನುಮತಿ ಕಡ್ಡಾಯ: ಚಿಕ್ಕಮಗಳೂರು ನಗರಸಭೆ

Prasthutha|

ಚಿಕ್ಕಮಗಳೂರು: ಅನುಮತಿ ಇಲ್ಲದೇ ಮಸೀದಿ, ಚರ್ಚ್, ಪ್ರಾರ್ಥನಾ ಮಂದರಿಗಳಲ್ಲಿ ಧ್ವನಿವರ್ಧಕಗಳ ಬಳಕೆ‌ ಮಾಡುವಂತಿಲ್ಲ ಎಂದು ಚಿಕ್ಕಮಗಳೂರು ನಗರಸಭೆ ನೂತನ ಆದೇಶ ಹೊರಡಿಸಿದೆ.

- Advertisement -

ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು 37ನೇ ಬಜೆಟ್ ಮಂಡನೆ ಮಾಡಿದರು. ಆದರೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಒಂದು ಅಂಶವನ್ನು ಜಾರಿಗೊಳಿಸಿದರೆ ಸಾಕಷ್ಟು ವಿವಾದ ಸೃಷ್ಟಿಯಾಗುವ ಲಕ್ಷಣಗಳು ಕಂಡು ಬಂದಿದೆ. ನಗರದ ಜನರ ಆರೋಗ್ಯ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳಲ್ಲಿ ಬಳಕೆ ಮಾಡುತ್ತಿರುವ ಅನಧಿಕೃತ ಧ್ವನಿವರ್ಧಕಗಳ ವಿರುದ್ಧ ಬಜೆಟ್ ನಲ್ಲಿ ಸಮರ ಸಾರಲಾಗಿದ್ದು, ಕೋರ್ಟ್ ಆದೇಶವನ್ನು ಧಿಕ್ಕರಿಸಿ ಮಸೀದಿ, ಚರ್ಚ್, ದೇವಸ್ಥಾನಗಳಲ್ಲಿ ಬಳಕೆ ಮಾಡುತ್ತಿರುವ ಮೈಕ್ ಗಳ  ವಿರುದ್ಧ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನು ಆಯವ್ಯಯದಲ್ಲಿ ನೀಡಲಾಗಿದೆ. 

ಇನ್ನು ಮುಂದೆ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಕಾರ್ಪೋರೇಷನ್ ಅನುಮತಿ ಇಲ್ಲದೇ ಬೇಕಾಬಿಟ್ಟಿ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಇದು ದೇವಸ್ಥಾನ, ಮಸೀದಿ ಮತ್ತು ಚರ್ಚೇ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

Join Whatsapp