ಪೆಪ್ಪರ್ ಫ್ರೈ ಸಿಇಒ ಅಂಬರೀಷ್ ಮೂರ್ತಿ ನಿಧನ

Prasthutha|

ನವದೆಹಲಿ: ಪೆಪ್ಪರ್ ಫ್ರೈ ಎಂಬ ಪೀಠೋಪಕರಣ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಇಒ ಅಂಬರೀಷ್ ಮೂರ್ತಿ ಇಂದು ನಿಧನರಾಗಿರುವ ಸುದ್ದಿ ಕೇಳಿಬಂದಿದೆ.

- Advertisement -


ಲಡಾಖ್ ನ ಲೆಹ್ ನಗರದಲ್ಲಿ ಸೋಮವಾರ ರಾತ್ರಿ (ಆಗಸ್ಟ್ 7) 51 ವರ್ಷದ ಅವರು ಹೃದಯಸ್ತಂಭನಗೊಂಡು ಇಹಲೋಕ ತ್ಯಜಿಸಿರುವುದು ತಿಳಿದುಬಂದಿದೆ. ಪೆಪ್ಪರ್ ಫ್ರೈನ ಇನ್ನೊಬ್ಬ ಸಹ-ಸಂಸ್ಥಾಪಕ ಆಶೀಷ್ ಶಾ ಅವರು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು, ಅಂಬರೀಷ್ ಮೂರ್ತಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.


‘ನನ್ನ ಸ್ನೇಹಿತ, ಗುರು, ಸಹೋದರ, ಆಪ್ತ ಅಂಬರೀಷ್ ಮೂರ್ತಿ ಇನ್ನಿಲ್ಲ. ಲೆಹ್ನಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ನಿನ್ನೆ ರಾತ್ರಿ ಅವರನ್ನು ಕಳೆದುಕೊಂಡೆವು. ಅವರ ಕುಟುಂಬ ಮತ್ತು ಆಪ್ತರಿಗೆ ಈ ಅಗಲಿಕೆಯ ನೋವು ಸಹಿಸಲು ಶಕ್ತಿ ಸಿಗಲೆಂದು ದಯವಿಟ್ಟು ಪ್ರಾರ್ಥಿಸಿ’ ಎಂದು ಆಶೀಶ್ ಷಾ ಅವರು ಟ್ವೀಟ್ ಮಾಡಿದ್ದಾರೆ.

Join Whatsapp