ಬೆಂಗಳೂರು: ವಿವಾದಾತ್ಮಕ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲು ”ಸಚಿವರು, ಮುಖ್ಯಮಂತ್ರಿಗಳಿಗೆ ಇರುವ ಆಸಕ್ತಿ ಕಚೇರಿಯ ಆಡಳಿತಾತ್ಮಕ ಫೈಲ್ಸ್ಗಳನ್ನು ನೋಡಲು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ” ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ”ಪಠ್ಯಪುಸ್ತಕ ಪ್ರಿಂಟ್ ಆಗ್ತಿಲ್ಲ, ರಸ್ತೆ ಗುಂಡಿ ಮುಚ್ಚಲಿಲ್ಲ, ನೆರೆ ಪರಿಹಾರದ ಮನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ , ಸಿಎಂ ಕಚೇರಿಯಲ್ಲಿ ಕಡತಗಳ ವಿಲೇವಾರಿ ಆಗುತ್ತಿಲ್ಲ” ಎಂದು ಕಿಡಿಗಾರಿದ್ದಾರೆ.
ಅಲ್ಲದೆ ಕಳೆದ ವಾರ ಸ್ಪೀಕರ್ ಕಾಗೇರಿ ಅವರು ಎಲ್ಲ ಸಚಿವರು, ಶಾಸಕರಿಗೆ ಸಿನೆಮಾ ವೀಕ್ಷಣೆ ಮಾಡಲು ವಿಧಾಸನಭೆಯಲ್ಲಿ ಆಹ್ವಾನ ನೀಡಿದ್ದರು. ಹಲವಾರು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ಈ ಚಿತ್ರದ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿದೆ.