ಹಿಜಾಬ್‌ ವಿಚಾರದಲ್ಲಿ ಪುರೋಹಿತ ಹಿರೇಮಗಳೂರು ಕಣ್ಣನ್ ಆಕ್ಷೇಪಾರ್ಹ ಹೇಳಿಕೆ; ತೀವ್ರ ಆಕ್ರೋಶ ವ್ಯಕ್ತ

Prasthutha|

ಮೈಸೂರು: ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು,  ಹೀಗಾಗಿ ಶಾಲಾ, ಕಾಲೇಜುಗಳಿಂದ ಹಿಜಾಬ್ ಹೊರಟು ಹೋಗಿದೆ  ಎಂದು ಪುರೋಹಿತ ಹಿರೇಮಗಳೂರು ಕಣ್ಣನ್ ಹಿಜಾಬ್‌ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೈದ್ಯರ ಬಳಿ ಹೋದಾಗ ಎಲ್ಲ ಬಿಚ್ಚಿ ತೋರಿಸುತ್ತೇವೆ. ಹಾಗಿರುವಾಗ ಈ ವಿಚಾರ ಮಾತನಾಡಲು ನನಗೆ ಯಾವುದೇ ಭಯವಿಲ್ಲ. ಇನ್ನು ಮುಂದೆ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ‘ಮುಖ’ ಮುಚ್ಕೊಂಡು ಬಾರದೆ …. ಮುಚ್ಕೊಂಡು ಬರಲಿ ಎಂಬ ಅಶ್ಲೀಲ ಹೇಳಿಕೆ ನೀಡಿದ್ದಾರೆ.

ಈ  ಬಗ್ಗೆ ಪ್ರತಿಕ್ರಿಯಿಸಿರುವ  ಖ್ಯಾತ ಉಪನ್ಯಾಸಕˌ ಚಿಂತಕ  ಡಾ. ಜೆ ಎಸ್ ಪಾಟೀಲ್  “ಕನ್ನಡದಲ್ಲಿ ಮಂತ್ರ ಹೇಳಿದ ನಾಲಿಗೆ ಮತೀಯ ದ್ವೇಷದ ನಂಜು ಕಾರುತ್ತಿದೆ. ಅದು ಇವರ ರಕ್ತಗತ ಗುಣ. ಅದೆಂದಿಗೂ ತೊಲಗುವುದಿಲ್ಲ. ಹೀಗೆ ತನ್ನೊಳಗೆ ಮುಚ್ಚಿಕೊಂಡ ಕೊಳೆಯನ್ನು ಆಗಾಗ ಪ್ರದರ್ಶನ ಮಾಡುತ್ತಲೇ ಇರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಆರಂಭದಿಂದ ಕೊನೆಯ ವರೆಗೂ ವಿವಾದಾತ್ಮಕ ಭಾಷಣಗಳ ಮೂಲಕ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆಬಿದ್ದಿದೆ. ಹಿರೇಮಗಳೂರು ಕಣ್ಣನ್ ರ ಈ ಹೇಳಿಕೆಗಳಿಂದಾಗಿ ಅವರ ಹಿತೈಷಿಗಳು, ಒಡನಾಡಿಗಳು ಸಹಿತ ಹಲವು ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp